ಮೈಸೂರು: ವಿಜಯನಗರ 2ನೇ ಹಂತದಲ್ಲಿರುವ ಕೃಷಿಕ್ ಸರ್ವೋದಯ ಪ್ರತಿಷ್ಠಾನದ ವತಿಯಿಂದ ಐಎಎಸ್, ಐಪಿಎಸ್. ಐಎಫ್‌ಎಸ್, ಕೆಎಎಸ್. ಕೆಇಎಸ್, ಕೆಎಸ್‌ಪಿಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ತರಬೇತಿ ನೀಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಪ್ರಯೋಜನ ಪಡೆಯಬಹುದಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಂಸ್ಥೆಯ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ತಿಳಿಸಿದರು.
ಮೈಸೂರು ಶಾಖೆಯ 1998ರಲ್ಲಿ ಪ್ರಾಂಭವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದೆ. ಈವರೆಗೆ 206ಕ್ಕೂ ಹೆಚ್ಚು ತರಬೇತಿ ನೀಡಿದ್ದು, ಗ್ರಾಮೀಣ ಪ್ರದೇಶದ ಹಲವಾರು ಅಭ್ಯರ್ಥಿಗಳು ಸರ್ಕಾರಿ ಉದ್ಯೋಗ ಪಡೆದಿದ್ದಾರೆ.
ಇದೊಂದು ಸ್ವಯಂ ಸೇವಾ ಟ್ರಸ್ಟ್ ಆಗಿದ್ದು, ಸಮಾಜದ ಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಭಾವಂತರು ಯಶಸ್ವಿಯಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ನೆರವಾಗುತ್ತಿದೆ. ಆಸಕ್ತರು ಪ್ರಯೋಜನ ಪಡೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಲೂ ರಾಜ್ಯ ಹಾಗೂ ಕೇಂದ್ರದ ಅನೇಕ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ತರಬೇತಿ ಪಡೆಯಬಹುದಾಗಿದೆ ಎಂದರು. ಸಂಸ್ಥೆಯ ಪದಾಧಿಕಾರಿಗಳಾದ ಡಾ.ಕೆ.ಚಿದಾನಂದಗೌಡ, ಕೆ.ಎಂ.ಚಂದ್ರಶೇಖರ್, ಪಿ.ಶಾರದಮ್ಮ, ಎಚ್.ಕಿಶೋರ್‌ಚಂದ್ರ, ವೈ.ಕೆ. ಕೆಂಚೇಗೌಡ ಹಾಜರಿದ್ದರು.