ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಶಿರಗಾಂವ ಗ್ರಾಮಸ್ಥರು ಸನ್ಮಾನಿಸಿದರು. ವಿರೂಪಾಕ್ಷಿ ಹಿರೇಮಠ, ಸಂಜೀವ ಪೂಜಾರಿ, ಸುಖದೇವ ಜಾಧವ, ನಂದಕುಮಾರ ಹೊನಶೆಟ್ಟಿ ಇದ್ದರು. 
ಜಿಲ್ಲೆ

ಸಹಕಾರಿ ರಂಗಕ್ಕೆ ಸಂಸದ ಜೊಲ್ಲೆ ಕೊಡುಗೆ ಅಪಾರ

ಚಿಕ್ಕೋಡಿ: ಸಹಕಾರ, ಶಿಕ್ಷಣ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮುಂಚೂಣಿ ನಾಯಕರಾಗಿರುವ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಸಾವಿರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ಮೂಲಕ ಕುಟುಂಬಕ್ಕೆ ಆಸರೆಯಾಗಿದ್ದಾರೆ ಎಂದು ಶಿರಗಾಂವ ಗ್ರಾಮದ ಬೀರೇಶ್ವರ ಸಹಕಾರಿ ಸ್ಥಾನಿಕ ಆಡಳಿತ ಮಂಡಳಿ ನಿರ್ದೇಶಕ ಸುಖದೇವ ಜಾಧವ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಕೃಷಿ ಪತ್ತಿನ ಸಹಕಾರಿ ಸಂಘಗಳ ವಿಭಾಗದಿಂದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಶಿರಗಾಂವ ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಮಾತನಾಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಬೆಳವಣಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು. ವಿರೂಪಾಕ್ಷಿ ಹಿರೇಮಠ, ಸಂಜೀವ ಪೂಜಾರಿ, ನಂದಕುಮಾರ ಹೊನಶೆಟ್ಟಿ, ರಾಮು ಉದಗಟ್ಟಿ, ರಾಜೇಂದ್ರ ಹರಗಾಪುರೆ, ವಿಜಯ ಚೌಗಲೆ, ಮಹಾಲಿಂಗ ಫರಾಳೆ, ಶಿವಗೌಡ ಪಾಟೀಲ ಇದ್ದರು.