ಶಿಗ್ಗಾಂವಿ: ಯಾವುದೇ ಸಹಕಾರಿ ಸಂಘಗಳು ಬೆಳೆಯ ಬೇಕಾದರೆ ಸಾರ್ವಜನಿಕರ ಸಹಕಾರ ಮನೋಭಾವ ಮುಖ್ಯವಾಗುತ್ತದೆ ಎಂದು ಧಾರವಾಡದ ಕೆಸಿಸಿ ಬ್ಯಾಂಕ್ ನೂತನ ನಿರ್ದೇಶಕ ಸಂಗಮೇಶ ಕಂಬಾಳಿಮಠ ಹೇಳಿದರು.
ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ಕ್ರೆಡಿಟ್ ಕೋ ಆಪ್ ಸೊಸೈಟಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಹಕಾರ ಮತ್ತು ಹೊಂದಾಣಿಕೆಯಿಂದ ಪಟ್ಟಣದಲ್ಲಿ ಈ ಸೊಸೈಟಿ ಕಳೆದ ಐದು ವರ್ಷಗಳಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮುಂದೆಯೂ ಹೀಗೆಯೇ ಅಭಿವೃದ್ಧಿ ಪಥದಲ್ಲಿ ನಡೆಯಲಿ ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ಮಹಲಿಂಗಪ್ಪ ಹಡಪದ, ವಿಶ್ವನಾಥ ಬಂಡಿವಡ್ಡರ, ಶಿವಕುಮಾರ ಮಡ್ಲಿಕರ, ಮುತ್ತುರಾಜ ಕ್ಷೌರದ, ಬಸವರಾಜ ಜಂಗಳಿ, ಮಲ್ಲಿಕಾರ್ಜುನ ಹಡಪದ, ಶಿವರಾಜ ಕ್ಷೌರದ, ಬಸವರಾಜ ಹಡಪದ, ಸಿದ್ದಪ್ಪ ಗಂಜೀಗಟ್ಟಿ, ಈರಣ್ಣ ಯಲಿಗಾರ, ರವಿ ಹಡಪದ, ಆನಂದಕುಮಾರ ಪಾಟೀಲ, ಪ್ರೇಮಾ ನಾವಿ, ಮಂಜುನಾಥ ಓಣಿಮನಿ, ಚೇತನ ಕೊರವರ, ಇತರರಿದ್ದರು.