ನರೇಗಲ್ಲ: ಗ್ರಾಮೀಣ ಭಾಗದ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಉದ್ದೇಶದಿಂದ ಪ್ರಾರಂಭಗೊಂಡ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿನ ಸಾಲ ಸೌಲಭ್ಯವನ್ನು ರೈತರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕೋಟುಮಚಗಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ ಕುಲಕರ್ಣಿ ಹೇಳಿದರು.
ಸಮೀಪದ ಕೋಟುಮಚಗಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘ-2ರಲ್ಲಿ ಶುಕ್ರವಾರ ಸಂಘದ ಸದಸ್ಯರಿಗೆ ಟ್ರ್ಯಾಕ್ಟರ್ ಸಾಲ ಮಂಜೂರಾತಿ ಪತ್ರ ನೀಡಿ ಅವರು ಮಾತನಾಡಿದರು.
ವಿವಿಧ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಟ್ರ್ಯಾಕ್ಟರ್, ಗೃಹಬಳಕೆ, ವ್ಯಾಪಾರ ಮಾಡಲು, ಹೈನುಗಾರಿಕೆ ಇತರ ಕಾರಣಕ್ಕೆ ಪ್ರಾಥಮಿಕ ಕೃಷಿ ಸಾಲ ಸಂಘಗಳ ಮೂಲಕ ಸಾಲ ನೀಡಲಾಗುತ್ತಿದೆ. ಇದು ಸಾಲ ಮತ್ತು ಆರ್ಥಿಕ ಸೇವೆಗಳ ಹೊರತಾಗಿ ರೈತರಿಗೆ ಮತ್ತು ಗ್ರಾಮೀಣ ಕೃಷಿ ಸಮುದಾಯಗಳಿಗೆ ಸೇವೆಗಳನ್ನು ಒದಗಿಸುತ್ತಿದೆ ಎಂದರು.
ಸಂಘದ ನಿರ್ದೇಶಕರಾದ ಪ್ರಕಾಶ ಮುಧೋಳ, ಈರಣ್ಣ ನೇಗಲಿ, ಬಸವರಾಜ ನವಲಗುಂದ, ಮಾರುತಿ ಪೂಜಾರ, ಮಲ್ಲಪ್ಪ ಇಬ್ರಾಹಿಂಪೂರ, ಚನ್ನಬಸನಗೌಡ ಸಂಕನಗೌಡ್ರ, ವೆಂಕಟೇಶ ಗೌಡರ ಇದ್ದರು. ವ್ಯವಸ್ಥಾಪಕ ಲೋಕೇಶ ಸಂಕನಗೌಡ್ರ ನಿರ್ವಹಿಸಿದರು.