ಕಾರವಾರ: ಜಿಲ್ಲೆಯಲ್ಲಿ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳ ನಂತರ ಅತ್ಯಧಿಕ ಹಣಕಾಸಿನ ವ್ಯವಹಾರ ನಡೆಸುತ್ತಿರುವ 67 ಸೌಹಾರ್ದ ಸಹಕಾರಿಗಳೂ ನಷ್ಟದಲ್ಲಿವೆ ಎಂಬ ಮಾಹಿತಿ ಬಹಿರಂಗವಾಗಿದೆ.
ಹೌದು, ಸಹಕಾರಿ ಸಂಘಗಳು, ಅರ್ಬನ್ ಬ್ಯಾಂಕ್‌ಗಳಷ್ಟೇ ಅಲ್ಲ. ಜಿಲ್ಲೆಯ ಕೆಲವು ಸೌಹಾರ್ದ ಸಹಕಾರಿಗಳೂ ನಷ್ಟದಲ್ಲಿವೆ. ಸಹಕಾರಿ ಕಾಯ್ದೆಗಿಂತ ಸ್ವಲ್ಪ ಭಿನ್ನವಾಗಿ ಕಾರ್ಯ ನಿರ್ವಹಿಸುವ 272 ಸೌಹಾರ್ದ ಸಹಕಾರಿಗಳು ಜಿಲ್ಲೆಯಲ್ಲಿ ನೋಂದಣಿಯಾಗಿವೆ. ಅದರಲ್ಲಿ 241 ಪ್ರಸ್ತುತ ಕಾರ್ಯ ನಿರ್ವಹಿಸುತ್ತಿವೆ. 215 ಸೌಹಾರ್ದ ಸಹಕಾರಿಗಳು 2024 ನೇ ಸಾಲಿನ ಆಡಿಟ್ ವರದಿಯನ್ನು ಸಲ್ಲಿಸಿದ್ದು, ಅವುಗಳಲ್ಲಿ 67 ಸಂಘಗಳು ನಷ್ಟದಲ್ಲಿವೆ ಎಂಬ ಅಂಶ ಸಂಬಂಧಪಟ್ಟ ಇಲಾಖೆ ಬಹಿರಂಗಪಡಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಸೌಹಾರ್ದ ಸಹಕಾರಿಗಳು ವ್ಯಾಪಕವಾಗಿ ತಲೆ ಎತ್ತುತ್ತಿವೆ. ಉತ್ತರ ಕನ್ನಡ ಜಿಲ್ಲೆಯಲ್ಲೇ ವರ್ಷಕ್ಕೆ 25 ರಷ್ಟು ಸೌಹಾರ್ದ ಸಹಕಾರಿಗಳು ಹುಟ್ಟುತ್ತಿವೆ. ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ದಾಖಲೆ ಒದಗಿಸಲಾಗದ ಹಲವು ಕೆಳ ಹಾಗೂ ಮಧ್ಯಮ ವರ್ಗದ ಜನರನ್ನು ಈ ಸೌಹಾರ್ದ ಸಹಕಾರಿಗಳು ಕೇಂದ್ರೀಕರಿಸುತ್ತಿವೆ. ಯಾವುದೇ ರಾಷ್ಟ್ರೀಕೃತ ಅಥವಾ ಖಾಸಗಿ ಬ್ಯಾಂಕ್‌ಗಳು ನೀಡುವುದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಠೇವಣಿಗಳಿಗೆ ನೀಡುವ ಭರವಸೆ ನೀಡುತ್ತಿವೆ. ಕೆಲವು ಸಹಕಾರಿಗಳು ಸಾವಿರಾರು ಕೋಟಿ ರೂ. ಬಂಡವಾಳ ಹೊಂದಿ. ಅದಕ್ಕೆ ಸರಿಯಾಗಿ ದುಡಿಯುವ ಬಂಡವಾಳವನ್ನೂ ಹೊಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಆರ್ಥಿಕ ಶಿಸ್ತು ಹಾಗೂ ಇನ್ಶುರೆನ್ಸ್ನಂಥ ಸುರಕ್ಷತೆಯನ್ನು ಅಳವಿಡಿಸಕೊಂಡು ರಾಜ್ಯದ ವಿವಿಧೆಡೆ ತಮ್ಮ ಶಾಖೆಗಳನ್ನು ವಿಸ್ತರಿಸಿವೆ. ಆದರೆ, ಎಲ್ಲ ಸೌಹಾರ್ದ ಸಹಕಾರಿಗಳೂ ಹಾಗಿಲ್ಲ. ಸುರಕ್ಷಿತವಲ್ಲ ಎಂಬ ಅಂಶ ಕೂಡ ಗಮನಿಸಬೇಕಾಗಿದೆ.
ನಿಯಂತ್ರಣ ಕಡಿಮೆ:
ಸೌಹಾರ್ದ ಸಹಕಾರಿಗಳ ನೋಂದಣಿ ಪ್ರಕ್ರಿಯೆ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯಲ್ಲೇ ನಡೆದರೂ ಮುಂದೆ ಉಪ ನಿಬಂಧಕರ ಅಥವಾ ಸಹಾಯಕ ನಿಬಂಧಕರ ನಿಯಂತ್ರಣ ಇರುವುದಿಲ್ಲ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇವುಗಳ ಮೇಲ್ವಿಚಾರಣೆ ನಡೆಸುತ್ತದೆ. ಜಿಲ್ಲೆಯಲ್ಲಿ ಒಬ್ಬ ಅಭಿವೃದ್ಧಿ ಅಧಿಕಾರಿ ಮಾತ್ರ ಇರುತ್ತಾರೆ. ಹಾಗಾಗಿ ಸೌಹಾರ್ದ ಸಹಕಾರಿಗಳಿಗೆ ಸಹಕಾರಿ ಸಂಸ್ಥೆಗಳಂತೆ ಅಥವಾ ಬ್ಯಾಂಕಿಂಗ್ ಸಂಸ್ಥೆಗಳಂತೆ ನಿಯಂತ್ರಣ ಕಡಿಮೆ. ಇನ್ನೂ ಮುಖ್ಯವಾಗಿ ಇಲ್ಲಿ ಸಹಕಾರಿ ಸಂಘದಂತೆ ಸರ್ವ ಸದಸ್ಯರ ಸಭೆ ಕರೆಯುವ ವ್ಯವಸ್ಥೆ ಇಲ್ಲದ ಕಾರಣ ಅವುಗಳ ನಡೆಸುವ ಬ್ಯಾಂಕಿಂಗ್ ಹಾಗೂ ಹಣಕಾಸಿನ ವ್ಯವಹಾರಗಳ ಬಗ್ಗೆ ಪಾರದರ್ಶಕತೆ ಕಡಿಮೆ. ನಿಗಾ ಇಡುವವರಿಲ್ಲ. ಮತ್ತು ಪ್ರಶ್ನೆ ಎತ್ತುವವರಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಕೆಲ ಹಣವಂತರು ತಮ್ಮ ಹಣವನ್ನು ಅಽಕೃತ ಮಾಡಲು ಇಂಥ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದರೆ. ಇನ್ನು ಕೆಲವರು ನಕಲಿ ಹಣಕಾಸಿನ ವ್ಯವಹಾರಗಳನ್ನು ನಡೆಸಲು ಇಂಥ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವ ಆರೋಪವಿದೆ. ಇನ್ನು ಕೆಲವು ಸಹಕಾರಿಗಳ ಮುಖ್ಯಸ್ಥರು ಸೌಹಾರ್ದದ ಹಣವನ್ನು ಬೇರೆಡೆ ತೊಡಗಿಸಿ ಹಣ ಮಾಡುತ್ತಿರುವ ದೂರಿದೆ.
ನಕಲಿ ದಾಖಲೆ ಸೃಷ್ಟಿಸಿ ಅವ್ಯವಹಾರ ಕಾರವಾರದ ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ಗ್ರಾಹಕರಿಗೆ ಸುಮಾರು 50 ಕೋಟಿಗೂ ಅಧಿಕ ಮೋಸವಾದ ಆರೋಪ ಕೇಳಿ ಬಂದಿದೆ. ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿಯಮಿತದ ಬೆಳಗಾವಿಯ ವಿಭಾಗೀಯ ಅಧಿಕಾರಿ ಬಸವರಾಜ ಹೊಂಗಲ್ ಹಾಗೂ ಅಭಿವೃದ್ಧಿ ಅಧಿಕಾರಿ ಸಂತೋಷ ಅವರು ಸೌಹಾರ್ದ ಸಹಕಾರಿಯ ಎಲ್ಲ ಶಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ ತಿಳಿದುಬಂದಿದೆ. ಸೌಹಾರ್ದ ಸಹಕಾರಿ ಕಳೆದ ಎರಡು ವರ್ಷಗಳಿಂದ ಆಡಿಟ್‌ನಲ್ಲಿ ಲಾಭ ತೋರಿಸಿತ್ತು. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಲಾಭ ತೋರಿಸಲು ನಕಲಿ ಸಾಲಗಾರರನ್ನು ಸೃಷ್ಟಿ ಮಾಡಿರುವುದು ಕಂಡುಬಂದಿದೆ. ಮಾತ್ರವಲ್ಲದೇ ಒಟ್ಟಾರೆ ಬಂಡವಾಳದಲ್ಲಿ ಶೇ.20 ರಷ್ಟು ಲಿಕ್ವಿಡಿಟಿ ನಿರ್ವಹಿಸಬೇಕು ಎಂಬ ನಿಯಮವಿದೆ. ಆದರೆ, ಅದನ್ನೂ ನಕಲು ಮಾಡಿರುವುದು ಪರಿಶೀಲನೆಯ ವೇಳೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೀಘ್ರದಲ್ಲಿ ವರದಿ ಬರಲಿದ್ದು, ಸಹಕಾರಿಯ ಎಂಡಿ ಲಿಂಗರಾಜ ಕಲ್ಗುಟಕರ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದರ ಪರಿಣಾಮ ಹಲವರದ ಮೇಲೆ ಸೌಹಾರ್ದ ಸಹಕಾರಿಗಳು ಪ್ರಾರಂಭವಾಗಿ ಲಾಭಕ್ಕೆ ಬರಲು ಮೂರ್ನಾಲ್ಕು ವರ್ಷ ಬೇಕು. ಹಾಗೆ ಈಗ ತಾನೇ ಜನಿಸಿದ ಕೆಲವು ಸಹಕಾರಿಗಳು ನಷ್ಟದಲ್ಲಿವೆ. ಹೆಚ್ಚಿನವು ಲಾಭದಲ್ಲಿವೆ. ಜಿಲ್ಲೆಯಲ್ಲಿ ಜೈ ದುರ್ಗಾ ಮಾತಾ ಬಿಟ್ಟು ಬೇರೆ ಯಾವುದೇ ಸೌಹಾರ್ದ ಸಹಕಾರಿ ವಿರುದ್ಧ ಮೋಸದ ದೂರು ಕೇಳಿ ಬಂದಿಲ್ಲ. ಒಂದು ಸಹಕಾರಿಯಿಂದ ಹಲವದರ ಬಗ್ಗೆ ಜನ ಅನುಮಾನ ಮಾಡುವಂತಾಗಿದೆ ಎಂದು ಹಿರಿಯ ಅಽಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ, ಉತ್ತರ ಕನ್ನಡಕೆ.ಲಕ್ಷ್ಮೀಪ್ರಿಯಾಸದಾಶಿವಗಡದ ಸೌಹಾರ್ದ ಸಹಕಾರಿಯೊಂದರಲ್ಲಿ ಅವ್ಯಹಾರ ನಡೆದ ಬಗ್ಗೆ ಗ್ರಾಹಕರು ನನಗೆ ದೂರು ನೀಡಿದ್ದರು. ಸಂಬಂಧಪಟ್ಟ ಇಲಾಖೆಗೆ ತನಿಖೆಗೆ ಸೂಚಿಸಲಾಗಿದೆ. ಹಾಗೂ ತನಿಖಾ ವರದಿಯನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.-