ಜಿಲ್ಲೆ

ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಎನ್.ಯು. ನಾಚಪ್ಪ ಭಾಗಿ

ಸುನಿಲ್ ಪೊನ್ನೇಟಿ

ಮಡಿಕೇರಿ:

ದೇಶದ ಉದ್ದಗಲಕ್ಕೂ ರಾಜ್ಯತ್ವ, ಕೇಂದ್ರಾಡಳಿತ ಪ್ರದೇಶ ಮತ್ತು ಭೌಗೋಳಿಕ-ರಾಜಕೀಯ ಸ್ವಾಯತ್ತತೆಗಾಗಿ ಆಗ್ರಹಿಸುತ್ತಿರುವ ವಿವಿಧ ಹೋರಾಟಗಾರರ ಬೇಡಿಕೆಗಳನ್ನು ಪರಿಶೀಲಿಸಲು ೨ನೇ ರಾಜ್ಯ ಮರುಸಂಘಟನೆ ಆಯೋಗ ರಚಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸುತ್ತದೆ ಮತ್ತು ಜನಾಂಗೀಯ ರಾಜ್ಯ ಸ್ಥಾನಮಾನವನ್ನು ಹೊಂದಲು ಬಯಸುತ್ತದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹೇಳಿದರು. ಉತ್ತರಾಂದ್ರ ಚಳವಳಿಯ ನಾಯಕ, ನಿವೃತ್ತ ಐಆರ್‌ಎಸ್ ಅಧಿಕಾರಿ ಮೆಟ್ಟಾ ರಾಮರಾವ್ ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ೨ನೇ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಕರ್ನಾಟಕ ಏಕರೂಪದ ರಾಜ್ಯವಲ್ಲ, ಪ್ರಾಕೃತಿಕವಾಗಿ ವೈವಿಧ್ಯಮಯವಾಗಿದ್ದು, ೬ ಜನಾಂಗೀಯ ಭಾ?ಾ ಪ್ರದೇಶಗಳನ್ನು ಒಳಗೊಂಡಿದೆ. ಹೈದರಬಾದ್ ಕರ್ನಾಟಕದ ಉರ್ದು ಮಾತನಾಡುವ ಪ್ರದೇಶ, ಮುಂಬೈ ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶ, ಹಳೇ ಮೈಸೂರು ಕನ್ನಡ ಮಾತನಾಡುವ ಪ್ರದೇಶ, ತುಳುನಾಡು/ಮಂಗಳೂರು ತುಳು ಮಾತನಾಡುವ ಪ್ರದೇಶ ಅಂದರೆ ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿಯ ಭಾಗ, ಕೊಂಕಣಿ ಮಾತನಾಡುವ ಪ್ರದೇಶ ಕಾರವಾರ, (ಕೆನರಾ ಜಿಲ್ಲೆ) ಇದು ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿತ್ತು. ಕೊಡವ ಜನಾಂಗೀಯ-ಭಾ?ಾ ಜನಾಂಗದ ತಾಯ್ನಡು ಕೂರ್ಗ್ ಕೊಡವಲ್ಯಾಂಡ್ ಕರ್ನಾಟಕದೊಂದಿಗೆ ವಿಲೀನವಾದ ನಂತರ ಕೊಡಗು ಎಂದು ಕನ್ನಡೀಕರಿಸಲಾಗಿದೆ. ಆ ಮೂಲಕ ಸ್ಥಳೀಯವಾಗಿ ಇರುವ ಏಕೈಕ ಜನಾಂಗ ಕೊಡವರು ತಮ್ಮ ಸಾಂಪ್ರದಾಯಿಕ ತಾಯ್ನಡನ್ನು ಕಳೆದುಕೊಂಡರು ಎಂದರು.

ರಾಷ್ಟ್ರೀಯ ಭದ್ರತೆಯಲ್ಲಿ ಕೊಡವ ಸೈನಿಕರ ಭಾಗವಹಿಸುವಿಕೆಯಿಂದ ಅಪಾರ ಪ್ರಮಾಣದ ಕೊಡವ ಮಾನವ ಸಂಪನ್ಮೂಲ ಈ ದೇಶಕ್ಕೆ ಕೊಡುಗೆಯಾಗಿದೆ. ಅನುಪಾತದ ಪ್ರಕಾರ, ಸೈನ್ಯಕ್ಕೆ ಅತ್ಯಲ್ಪ ಜನಸಂಖ್ಯೆಯ ಕೊಡವರ ಕೊಡುಗೆ ವಿಶ್ವದಲ್ಲೇ ಅತ್ಯಧಿಕವಾಗಿದೆ. ಕೊಡವ ಪ್ರದೇಶದ ಕಾವೇರಿ ನದಿ ಕೋಟ್ಯಾಂತರ ಜನರ ಬಾಯಾರಿಕೆಯನ್ನು ನೀಗಿಸುತ್ತದೆ. ಕಾಫಿ ಉತ್ಪಾದನೆ ಮತ್ತು ಸಮೃದ್ಧ ಅರಣ್ಯ ಸಂಪತ್ತು ಅತಿ ಹೆಚ್ಚು ವಿದೇಶಿ ವಿನಿಮಯವನ್ನು ಗಳಿಸಿಕೊಡುತ್ತಿದೆ. ಕಾವೇರಿ ಜಲದೇವತೆ ಮತ್ತು ಕೊಡವ ಜನಾಂಗದ ತಾಯಿ ಎಂದು ಪರಿಗಣಿಸಲಾಗಿದೆ. ಇಡೀ ದಕ್ಷಿಣ ಭಾರತದ ನೀರಿನ ಬೇಡಿಕೆಯನ್ನು ಕಾವೇರಿ ಪೂರೈಸುತ್ತಿದ್ದಾಳೆ. ಈ ಎಲ್ಲಾ ಸಂಪನ್ಮೂಲಗಳನ್ನು ಕರ್ನಾಟಕ ದುರ್ಬಳಕೆ ಮಾಡಿಕೊಂಡು ಶೋಷಣೆ ಮಾಡುತ್ತಿದೆ ಹೊರತು ಪ್ರತಿಯಾಗಿ ಕೊಡವ ಜನರಿಗೆ ಏನನ್ನೂ ನೀಡುತ್ತಿಲ್ಲ ಎಂದು ಟೀಕಿಸಿದರು.

ನಮ್ಮ ಪ್ರದೇಶವನ್ನು ಕರ್ನಾಟಕದ ಸಂಪನ್ಮೂಲ ಉತ್ಪಾದಿಸುವ ಆಂತರಿಕ ವಸಾಹತು ಎಂದು ಪರಿಗಣಿಸಲಾಗಿದೆ ಮತ್ತು ಕೊಡವ ಜನರನ್ನು ಕರ್ನಾಟಕದ ಪ್ರಜೆಗಳೆಂದು ಪರಿಗಣಿಸಿಲ್ಲ. ಈ ವಿನಾಶಕಾರಿ ಪರಿಸ್ಥಿತಿಯಿಂದ ಹೊರಬರಲು ಮತ್ತು ಹಿಂದಿನ ರಾಜ್ಯ ಸ್ಥಾನಮಾನದ ಮರುಸ್ಥಾಪನೆಗಾಗಿ ಕಳೆದ ೩೩ ವ?ರ್ಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ. ಆರಂಭದ ಸುಮಾರು ೧೦ ವ?ರ್ಗಳ ಕಾಲ ನಾವು ಕೊಡವಲ್ಯಾಂಡ್‌ಗೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಬೇಕೆಂದು ಪ್ರಚಾರ ಮಾಡಿದ್ದೇವೆ. ೧೯೯೮ ರಲ್ಲಿ ನವದೆಹಲಿಯ ಜಂತರ್‌ಮಂತರ್ ನಲ್ಲಿ ಸಾಮೂಹಿಕ ರ‌್ಯಾಲಿ ನಡೆಸಿದ್ದೇವೆ, ಇದಕ್ಕೆ ಜಾಖರ್ಂಡ್ ನಾಯಕ ಸಿಬು ಸೊರೆನ್ ಜಿ ಸಾಕ್ಷಿಯಾಗಿದ್ದರು ಎಂದು ತಿಳಿಸಿದರು.

ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಯತಿರಾಜುಲು ಮುಖ್ಯ ಭಾ?ಣ ಮಾಡಿದರು. ಪ್ರಖ್ಯಾತ ಇತಿಹಾಸಕಾರ, ನಿವೃತ್ತ ಐಎಎಸ್ ಅಧಿಕಾರಿ, ಲೇಖಕ "ವೀ ದಿ ಪೀಪಲ್ ಆಫ್ ಸ್ಟೇಟ್ಸ್ ಆಫ್ ಭಾರತ್ - ದಿ ಮೇಕಿಂಗ್ ಅಂಡ್ ರೀಮೇಕಿಂಗ್ ಆಫ್ ಇಂಡಿಯಾಸ್ ಇಂಟರ್ನಲ್ ಬೌಂಡರೀಸ್" ನ ಡಾ.ಸಂಜೀವ್ ಚೋಪ್ರಾ ಅವರು ಸ್ವಯಂ ಆಡಳಿತ ಮತ್ತು ಫೆಡರಲಿಸಂ ಬಗ್ಗೆ ವಿವರಿಸಿದರು.
ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ದೇಶದ ಪ್ರತ್ಯೇಕ ರಾಜ್ಯಗಳ ಹೋರಾಟಗಾರರು ಇದ್ದರು.