ಜಿಲ್ಲೆ

ರಾಜಕೀಯ ಸ್ವಾಯತ್ತತೆ ಕೊಡವರ ಸಾಂವಿಧಾನಿಕ ಹಕ್ಕು

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯನ್ನು ಪಡೆಯುವುದು ಕೊಡವರ ಸಾಂವಿಧಾನಿಕ ಹಕ್ಕಾಗಿದ್ದು, ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಸುಪ್ರೀಂಕೋರ್ಟ್ ಖ್ಯಾತ ವಕೀಲ ವಿಕ್ರಮ್ ಹೆಗ್ಡೆ ಹೇಳಿದರು. ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬುಧವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿzರು.

1834ರಲ್ಲಿ ಕೊಡಗು ಎಂಬ ಸ್ವತಂತ್ರ ರಾಜ್ಯವನ್ನು ಬ್ರಿಟಿಷರು ವಶಪಡಿಸಿಕೊಂಡು, 1874ರ ಶೆಡ್ಯೂಲ್ಡ್ ಡಿಸ್ಟಿçಕ್ಟ್÷್ಸ ಕಾಯ್ದೆಯಡಿ ತರಲಾಯಿತು. ಬಳಿಕ 1919ರ ಭಾರತ ಸರ್ಕಾರ ಕಾಯ್ದೆಯಡಿಯಲ್ಲಿ ಕೊಡಗನ್ನು ಚೀಫ್ ಕಮಿಷನರ್ ಪ್ರಾಂತ್ಯವನ್ನಾಗಿ ಮಾಡಲಾಯಿತು. 1923ರಲ್ಲಿ ಕೊಡಗು ತನ್ನದೇ ಆದ ಶಾಸನ ಮಂಡಳಿಯನ್ನು ಪಡೆಯಿತು. ಆದರೆ 1956ರಲ್ಲಿ ರಾಜ್ಯ ಪುನರ್ ರಚನೆಯ ಕಾಯ್ದೆಯಡಿ ಕೊಡಗನ್ನು ಮೈಸೂರಿನೊಂದಿಗೆ ವಿಲೀನಗೊಳಿಸಿದ ನಂತರ ಕೊಡವ ಸಮುದಾಯದ ಅನನ್ಯ ಬೇಡಿಕೆಗಳಿಗೆ ಅಗತ್ಯ ಸ್ಪಂದನ ದೊರೆಯಲಿಲ್ಲ.

ಕೊಡವ ಸಂಸ್ಕöÈತಿ ಅತ್ಯಂತ ವಿಭಿನ್ನವಾಗಿದೆ, ಕೊಡವರು ಅನನ್ಯ ಆ್ಯನಿಮಿಸ್ಟಿಕ್ ಧಾರ್ಮಿಕ ಪಂಥದವರು. ಅವರ ದೇವತೆಗಳು, ಪೂಜಾ ವಿಧಾನಗಳು, ಪೂರ್ವಜ ಪೂಜೆ (ಗುರು ಕಾರಣ), ಪ್ರಕೃತಿ ಆರಾಧನೆ (ದೇವರಕಾಡು) ಭೂದೇವಿ, ಜಲದೇವಿ, ಸ್ವರ್ಗೀಯ ಆತ್ಮಗಳ ಆರಾಧನೆ ಇವುಗಳು ಪ್ರತ್ಯೇಕ ಮತ್ತು ವಿಶಿಷ್ಟವಾದವು. ಕೊಡಗಿಗೆ ಮಾತ್ರ ಸೀಮಿತವಾದ ಕೊಡವರ ವಿಶಿಷ್ಟ ಹಬ್ಬಗಳಿವೆ.

ಕೊಡವ ಭಾಷೆ ಕೇವಲ ಒಂದು ಭಾಷೆ ಮಾತ್ರವಲ್ಲ. ಅದು ಕೊಡವರ ಆತ್ಮಸ್ಫೂರ್ತಿ, ಇದಕ್ಕೆ ಯುಗ ಯುಗಗಳ ದೀರ್ಘ ಹಿನ್ನೆಲೆ ಇದೆ. 2017ರಲ್ಲಿ ಸಂಸದ ಬಿ.ಕೆ.ಹರಿಪ್ರಸಾದ್ ಅವರು ಕೊಡವ ಭಾಷೆಯನ್ನು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸುವ ವಿಚಾರವನ್ನು ಸಂಸತ್ತಿನಲ್ಲಿ ಎತ್ತಿದರು. ಆದರೆ ಈ ಕುರಿತು ಮುಂದೆ ಯಾವುದೇ ಕ್ರಮ ನಡೆಯಿಲ್ಲ. ಕೊಡವ ಭಾಷೆಗೆ ಅಧಿಕೃತ ಸ್ಥಾನಮಾನ ನೀಡಬೇಕು, ಆಡಳಿತ ಮತ್ತು ಶಿಕ್ಷಣದ ಮಾಧ್ಯಮವಾಗಿ ಬಳಸಬೇಕು. ಕೊಡವ ಸಂಸ್ಥೆಗಳಿಗೆ ಸರಿಯಾದ ಪ್ರತಿನಿಧಿ ಸಿಗಬೇಕು. ಕಳೆದ ಕೆಲವು ವರ್ಷಗಳಲ್ಲಿ ಮೂಪಾಜೆ ನಿಘಂಟುಗಳ ಪ್ರಕಟಣೆಗಳು ಆಗಿವೆ. ಆದರೆ ಭಾಷಾ ಪರಂಪರೆಯ ಸಂಗ್ರಹ ಮತ್ತು ಸಂರಕ್ಷಣೆಯ ಕೆಲಸ ಇನ್ನೂ ನಡೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಕೊಡವ ಜನಾಂಗೀಯ ಕೇಂದ್ರೀಕೃತ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯನ್ನು ಗಳಿಸುವತ್ತ ಸಿಎನ್‌ಸಿ ಭಾರತದ ಸಂವಿಧಾನದ ಅಡಿಯಲ್ಲಿ ಹಕ್ಕೊತ್ತಾಯ ಮಂಡಿಸುತ್ತಿದೆ. ಕೊಡವರ ಜನಾಂಗೀಯ ಹೆಗ್ಗುರುತಿನ ರಕ್ಷಣೆಯೊಂದಿಗೆ ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ವರ್ಗಿಕರಿಸುವುದರೊಂದಿಗೆ ಸೋಶಿಯಲ್ ಇಂಜಿನಿಯರಿAಗ್ ಮೂಲಕ ಸಬಲೀಕರಣಗೊಳ್ಳುವ ಹಂಬಲ ಒಂದೆಡೆಯಾದರೆ ಕೊಡವರ ರಾಜಕೀಯ ಅಶೋತ್ತರಗಳನ್ನು ಈಡೇರಿಸಲು ವಿಶೇಷ ಪೊಲಿಟಿಕಲ್ ಡಿಸೈನ್‌ಗಾಗಿ ಸಿಎನ್‌ಸಿ ಆಹೋರಾತ್ರಿ ಅವಿಶ್ರಾಂತವಾಗಿ ಶ್ರಮಿಸುತ್ತಿದೆ. ಇದಕೋಸ್ಕರ ರಾಜಕೀಯಾತ್ಮಕ, ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ನಡಿಗೆಯ ಮೂಲಕ ತಾರ್ಕಿಕ ಗುರಿ ಸಾಧನೆಯತ್ತ ನಡೆಯುತ್ತಿದೆ ಎಂದು ಹೇಳಿದರು.

ಕರ್ನಾಟಕ ಹೈ ಕೋರ್ಟ್ನ ಹಿರಿಯ ವಕೀಲ ಎಂ.ಟಿ. ನಾಣಯ್ಯ ಮಾತನಾಡಿ, ಕೊಡವರ ಸಂವಿಧಾನಿಕ ಹಕ್ಕುಗಳಿಗಾಗಿ ಕಳೆದ 35 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಸಿಎನ್‌ಸಿ ಸಂಘಟನೆಗೆ ಎಲ್ಲಾ ರೀತಿಯ ಬೆಂಬಲ ನೀಡಬೇಕೆಂದರು.

ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ಸಿ.ನಾಣಯ್ಯ ಮಾತನಾಡಿ, ಸಿಎನ್‌ಸಿ ಕೊಡವರ ಸಾಕ್ಷಿ ಪ್ರಜ್ಞೆಯಾಗಿ ಕಳೆದ 35 ವರ್ಷಗಳಿಂದ ಶಾಂತಿಯುತವಾಗಿ ಹಕ್ಕೊತ್ತಾಯ ಮಂಡಿಸುತ್ತಿದೆ. ಈ ರೀತಿಯ ಉತ್ಸಾಹದ ಚಿಲುಮೆಯಾಗಿ ಹೋರಾಟವನ್ನ ಇಲ್ಲಿಯವರೆಗೆ ತಲುಪಿಸಿದ ಎನ್.ಯು.ನಾಚಪ್ಪ ಅವರು ನಮ್ಮೆಲ್ಲರ ಕಣ್ಮಣಿಯಾಗಿದ್ದಾರೆ. ಪ್ರತಿಯೊಬ್ಬ ಮಗುವು ತನ್ನ ಭವಿಷ್ಯತ್ತಿನ ಬೆಳಕಾಗಿರುವ ಸಿಎನ್‌ಸಿಯೊಂದಿಗೆ ಗುರುತಿಸಿಕೊಳ್ಳಬೇಕೆಂದರು.

ಕಲಿಯಂಡ ಪ್ರಕಾಶ್, ಅಜ್ಜಿಕುಟ್ಟಿರ ಲೋಕೇಶ್, ಕಲಿಯಂಡ ಮೀನಾ ಪ್ರಕಾಶ್, ಪುಲ್ಲೇರ ಸ್ವಾತಿ, ಅರೆಯಡ ಸವಿತಾ, ಬೊಟ್ಟಂಗಡ ಸವಿತಾ, ನಂದೇಟಿರ ಕವಿತಾ, ನಂದಿನೆರವAಡ ರೇಖಾ ನಾಚಪ್ಪ, ಅಪ್ಪಚ್ಚಿರ ರೀನಾ, ಚೋಳಪಂಡ ಜ್ಯೋತಿ, ಪಟ್ಟಮಾಡ ಲಲಿತಾ, ಬಿದ್ದಂಡ ರಾಧ, ಐಚಂಡ ರಶ್ಮಿ, ಪಟ್ಟಮಾಡ ಕುಶಾ, ಚಿರಿಯಪಂಡ ಸುರೇಶ್, ಕಿರಿಯಮಾಡ ಶರೀನ್, ಕಾಂಡೇರ ಸುರೇಶ್, ಪುಳ್ಳಂಗಡ ನಟೇಶ್ ಮತ್ತಿತರರು ಇದ್ದರು.