ಚಾವಡಿ ಲೋಕೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗಣೇಶ್, ಗಿರೀಶ್, ರಾಜೀವ್, ಆರ್.ಆನಂದ ಮೇಣಾಜಿ ಇದ್ದರು. 
ಜಿಲ್ಲೆ

ಸಿಎಂ ಜನಪ್ರಿಯತೆ ಸಹಿಸಲಾಗದೆ ಹೋರಾಟ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಶೋಷಿತ ಸಮುದಾಯಗಳಿಗೆ ಧ್ವನಿ ಕೊಡುವ ನಿಟ್ಟಿನಲ್ಲಿ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ನ್ಯಾಯ ಕೊಡುವ ಕೆಲಸ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯನವರ ಜನಪ್ರಿಯತೆ ಸಹಿಸದೇ ಪ್ರತಿಪಕ್ಷಗಳು ಅವರ ವಿರುದ್ಧ ಹೋರಾಟ ಮಾಡುತ್ತಿವೆ ಎಂದು ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಕಾರ್ಯಾಧ್ಯಕ್ಷ ಕೆ.ಚಾವಡೆ ಲೋಕೇಶ್ ದೂರಿದರು.

ಹಿಂದುಳಿದ ಸಣ್ಣ ಸಮಾಜಗಳಿಗೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಆಸಕ್ತಿ ವಹಿಸಿದ್ದಾರೆ. ಮೊದಲ ಬಾರಿಗೆ ಅವರು ಸಿಎಂ ಆಗಿದ್ದ ವೇಳೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಸಮುದಾಯಗಳ ಮೀಸಲಾತಿಯನ್ನು ಪರಿಷ್ಕರಿಸಿದ್ದರು. ಅಲೆಮಾರಿಗಳ ಪ್ರತ್ಯೇಕ ಪಟ್ಟಿ ಮಾಡಿದ್ದೂ ಅಲ್ಲದೆ ಅಲೆಮಾರಿ ಕೋಶವನ್ನು ರಚನೆ ಮಾಡಿದ್ದರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಲೆಮಾರಿಗಳ ಸಮಸ್ಯೆ ಪರಿಹಾರ ಹಾಗೂ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅಲೆಮಾರಿ ಆಯೋಗವನ್ನು ರಚನೆ ಮಾಡಿದ್ದರು. ಇದನ್ನು ಸಹಿಸದೇ ಪ್ರತಿಪಕ್ಷಗಳು ಅವರನ್ನು ತುಳಿಯುವ ಕೆಲಸ ಮಾಡುತ್ತಿವೆ. ಇದನ್ನು ನಿಲ್ಲಿಸದಿದ್ದರೆ ಅಲೆಮಾರಿ ಸಮುದಾಯದಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಆರ್.ಆನಂದ ಮೇಣಾಜಿ, ರಾಜೀವ್, ಗಣೇಶ್, ಗಿರೀಶ್ ಸುದ್ದಿಗೋಷ್ಠಿಯಲ್ಲಿದ್ದರು.