ಜಿಲ್ಲೆ

ನಿಷೇಧಿತ ಪ್ಲಾಸ್ಟಿಕ್​ ವಶ: 18,000 ದಂಡ ವಸೂಲಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ನಗರಸಭಾ ವ್ಯಾಪ್ತಿಯ ಸಂತೆಕಟ್ಟೆಯಲ್ಲಿ ಬುಧವಾರ ನಿಷೇಧಿತ ಪ್ಲಾಸ್ಟಿಕ್​ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ ನಡೆಸಿದ ಅಧಿಕಾರಿಗಳು 52 ಕೆ.ಜಿ ನಿಷೇಧಿತ ಪ್ಲಾಸ್ಟಿಕ್​ಗಳನ್ನು ವಶಪಡಿಸಿಕೊಂಡು, 18,000 ರೂ. ದಂಡ ವಿಧಿಸಿದ್ದಾರೆ.

ಈ ಸಂದರ್ಭದಲ್ಲಿ ಉದ್ದಿಮೆಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್​ಗಳನ್ನು ಉಪಯೋಗಿಸದ ಉದ್ದಿಮೆಯನ್ನು ಹಸಿರು ಸಂಸ್ಥೆ ಎಂದು ಘೋಷಿಸಲಾಯಿತು.

ಸಾರ್ವಜನಿಕರು, ಉದ್ದಿಮೆದಾರರು, ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್​ಗಳನ್ನು ಉಪಯೋಗಿಸುವುದು ಕಂಡುಬಂದಲ್ಲಿ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಿ, ದಂಡ ವಿಧಿಸಲಾಗುವುದು. ಎಲ್ಲಾ ಉದ್ದಿಮೆದಾರರು ಏಕ ಬಳಕೆಯ ಪ್ಲಾಸ್ಟಿಕ್​ಗಳನ್ನು ಉಪಯೋಗಿಸುವುದನ್ನು ತ್ಯಜಿಸಿ ಹಸಿರು ಸಂಸ್ಥೆ ಎಂದು ಘೋಷಿಸಿಕೊಳ್ಳುವಂತೆ, ಮನೆ, ಮದುವೆ ಹಾಲ್​, ಹೊಟೇಲ್​ಗಳಲ್ಲಿ ಸಮಾರಂಭ ಮಾಡುವಾಗ ಪ್ಲಾಸ್ಟಿಕ್​ ವಸ್ತುಗಳನ್ನು ಉಪಯೋಗಿಸದೇ ಮರುಬಳಕೆಯ ವಸ್ತುಗಳನ್ನು ಉಪಯೋಗಿಸಿ ಪ್ಲಾಸ್ಟಿಕ್​ ಉತ್ಪಾದನೆಯನ್ನು ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೆ ಕೈಜೋಡಿಸುವಂತೆ ನಗರಸಭೆ ಪೌರಾಯುಕ್ತ ರಾಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.