ಉಡುಪಿ: ನಗರಸಭೆಯಿಂದ ಪಾವತಿಸಬೇಕಿದ್ದ ಹಣವನ್ನು ಈಗಾಗಲೇ ನೀಡಲಾಗಿದ್ದು, ನ.1ಕ್ಕೆ ಸರಳೇಬೆಟ್ಟು ವಸತಿ ಸಮುಚ್ಛಯದ ಮನೆಗಳನ್ನು ಲಾನುಭವಿಗಳಿಗೆ ಹಸ್ತಾಂತರಿಸಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಸ್ಲಂ ಬೋರ್ಡ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಒಪ್ಪಂದ ಪ್ರಕಾರ 2022ರಲ್ಲೇ ಮನೆಗಳನ್ನು ಹಸ್ತಾಂತರ ಮಾಡಬೇಕಿತ್ತು. ಅದರೆ ಕಾಮಗಾರಿ ವಿಳಂಬದಿಂದ ಲಾನುಭವಿಗಳು ಮನೆಗಳಿಗೆ ಬಾಡಿಗೆ ಕೊಡುವ ಜೊತೆಗೆ ಬ್ಯಾಂಕ್ ಸಾಲ ಪಾವತಿಯನ್ನೂ ಮಾಡುವ ಅನಿವಾರ್ಯತೆ ಎದುರಾಗಿದ್ದು, ಸಾಲ ಪಾವತಿ ಶುರು ಮಾಡದ ಖಾತೆಗಳು ಎನ್ಪಿಎ ಆಗುತ್ತಿವೆ. ಮನೆ ಸಂಪೂರ್ಣವಾಗದೆ ಸಾಲದ ಕೊನೆಯ ಕಂತು ಬ್ಯಾಂಕ್ನವರು ಬಿಡುಗಡೆ ಮಾಡುವುದಿಲ್ಲ. ಈಗಾಗಲೇ ಬ್ಯಾಂಕ್ನವರೊಂದಿಗೆ ಮಾತನಾಡಿದ ಸಾಲ ಕಂತು ಮರುಪಾವತಿಯನ್ನು 6 ತಿಂಗಳು ವಿಸ್ತರಿಸಿದ್ದೇವೆ. ಅದಕ್ಕೂ ಮುನ್ನ ಮನೆ ಬಿಟ್ಟುಕೊಡದಿದ್ದರೆ ಬ್ಯಾಂಕ್ನವರೇ ಮನೆ ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಎಂದು ಎಚ್ಚರಿಸಿದರು.
ಸ್ಲಂ ಬೋರ್ಡ್ ಬೇಜವಾಬ್ದಾರಿಯಿಂದ ನಗರಸಭೆಗೆ ಕೆಟ್ಟ ಹೆಸರು ಬರುವಂತಾಗಿದೆ. ಸಂಪರ್ಕ ರಸ್ತೆ ನಿರ್ಮಾಣಕ್ಕೆ ಮೀಸಲಿಟ್ಟ ಅನುದಾನವನ್ನು ಬೇರೆ ಕಾಮಗಾರಿಗೆ ಉಪಯೋಗಿಸಲಾಗಿದೆ. ಕೂಡಲೇ ಜನರಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ರಸ್ತೆ ಮತ್ತು ಒಳಚರಂಡಿ ಕಾಮಗಾರಿಯನ್ನು ನಡೆಸಬೇಕು ಎಂದು ಸೂಚಿಸಿದರು.
ಡಿಸೆಂಬರ್ನಲ್ಲಿ ಡ್ರಜ್ಜಿಂಗ್ ಮಾಡಿ
ಈ ಬಾರಿ ಮಳೆ ಣಿಸಿರುವುದರಿಂದ ನಗರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಡಿಸೆಂಬರ್ನಲ್ಲಿ ಬಜೆ ಡ್ಯಾಂ ಸಹಿತ 5 ಕಡೆಗಳಲ್ಲಿ ಹೂಳೆತ್ತಲು ಪ್ರತ್ಯೇಕ ಟೆಂಡರ್ ಕರೆಯಬೇಕು. ಜನವರಿಯಿಂದಲೇ ನೀರಿನ ಶೇಖರಣೆಗೆ ಕ್ರಮಕೈಗೊಳ್ಳಬೇಕು. ವಾರಾಹಿ ಕಾಮಗಾರಿ ಶೇ.40ರಷ್ಟು ಮಾತ್ರ ಪೂರ್ಣಗೊಂಡಿದ್ದು, ಯೋಜನೆ ಸಂಪೂರ್ಣ ವಿಲವಾಗಿದೆ. ಕಾಮಗಾರಿ ಇದೇ ರೀತಿ ಮುಂದುವರಿದರೆ ಉಡುಪಿಗೆ ನೀರು ಬರಲು 2 ವರ್ಷ ಬೇಕಾಗಬಹುದು. ಹೀಗಾಗಿ ಯೋಜನೆ ಪ್ರಗತಿ ಬಗ್ಗೆ ಇಂಜಿನಿಯರ್ ಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.
ಪೌರಾಯುಕ್ತರು-ಸದಸ್ಯರ ಮಾತಿನ ಚಕಮಕಿ
ಶಾಸಕರ ಅಧ್ಯಕ್ಷತೆಯಲ್ಲಿ ಒಪ್ಪಿಗೆ ಪಡೆದ ಕಾರ್ಯಯೋಜನೆಯನ್ನು ಬದಲಾಯಿಸಿ, ಆನುದಾನ ಹಂಚಿಕೆ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ. ಹಿಂದೂ ಸಮಾಜೋತ್ಸವ ಬ್ಯಾನರ್ಗಳನ್ನು ಏಕಾಏಕಿ ತೆರವುಗೊಳಿಸಲಾಗಿದೆ ಎಂದು ಸದಸ್ಯ ಗಿರೀಶ್ ಅಂಚನ್ ಅರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯಕ್ತ ರಾಯಪ್ಪ, ಕಾರ್ಯಯೋಜನೆ ಬದಲಾಯಿಸಿಲ್ಲ. ಹೆಚ್ಚುವರಿ ಅನುದಾನ ರದ್ದು ಮಾಡಲಾಗಿದೆ. ಪೊಲೀಸರ ಸೂಚನೆ ಮೇರೆಗೆ ಅನಧಿಕೃತ ಬ್ಯಾನರ್ ತೆರವು ಮಾಡಿದ್ದೇವೆ. ನಂತರ ಅರ್ಜಿ ಸಲ್ಲಿಸಿದ 29 ಬ್ಯಾನರ್ಗಳಿಗೆ ಅನುಮತಿ ನೀಡಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್ ತೆರವು ಮಾಡಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪೌರಾಯುಕ್ತರು ಹಾಗೂ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮಧ್ಯೆ ಪ್ರವೇಶಿಸಿದ ಶಾಸಕರು, ಸದಸ್ಯರ ಗಮನಕ್ಕೆ ತಂದು ಯಾವುದೇ ರ್ನಿಣಯ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಿದರು. ಮಾಜಿ ಅಧ್ಯೆ ಸುಮಿತ್ರಾನಾಯಕ್, ಸಹಾಯಕ ಅಭಿಯಂತರ ಯಶ್ವಂತ್ ಪ್ರಭು ಮೊದಲಾದವರು ಉಪಸ್ಥಿತರಿದ್ದರು.