ಜಿಲ್ಲೆ

ನಗರಸಭೆ ಕಡತ ನಾಪತ್ತೆ: ಸಿಒಡಿ ತನಿಖೆಗೆ ಆಗ್ರಹ

Vijayanagara - Veerendra

ಹೊಸಪೇಟೆ: ಹೊಸಪೇಟೆ ನಗರಸಭೆಯ ೪೯ ದಾಖಲೆ ಮಾಯ ಪ್ರಕರಣವನ್ನು ೨೪ ಗಂಟೆಗಳಲ್ಲಿ ಸಿಓಡಿ ಅಥವಾ ಲೋಕಾಯುಕ್ತ ತನಿಖೆಗೆ ಒಳಪಡಿಸುಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಕರವೇ ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಮಾತನಾಡಿ, ನಗರಸಭೆಯ ೪೯ ಕಡತಗಳು ಮಾಯವಾಗಿವೆ ಎಂಬ ಪತ್ರ ಬಂದಿದ್ದರಿAದ ನಾವು ಆಯುಕ್ತರನ್ನು ಭೇಟಿ ಮಾಡಿದರೆ, ಸಮಂಜಸ ಉತ್ತರ ನೀಡುತ್ತಿಲ್ಲ. ನಮ್ಮ ಒತ್ತಾಯಕ್ಕೆ ಮಣಿದ ಪೌರಾಯುಕ್ತರು ದಾಖಲೆಗಳನ್ನು ಪ್ರದರ್ಶನಕ್ಕೆ ಮುಂದಾದರಾದರೂ, ೧೩ ಕಡತಗಳು ಲಭ್ಯವಾಗಲಿಲ್ಲ. ಇದು ನಗರಸಭೆ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ತಕ್ಷಣವೇ ಅಧಿಕಾರಿಯನ್ನು ಹೊರಗಿಟ್ಟು ಪ್ರಕರಣವನ್ನು ಸಿಓಡಿ ಅಥವಾ ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕರವೇ ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಂತಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಎಹ್.ಶ್ರೀನಿವಾಸ, ಎಸ್.ಎಂ.ಜಾಫರ್, ಎಸ್.ಪಿ.ಅಂಬರೀಶಯ್ಯ, ಈ ರಮೇಶ್ ಲಿಂಗಣ್ಣಗುಜ್ಜಲ್, ಪ್ರಶಾಂತ್ ನಾಯಕ, ಲಕ್ಷ್ಮಣ ಕಂಪ್ಲಿ, ಉಮೇಶ್, ಗಾಳೇಶ್, ಲೋಕೇಶ್, ಸಮೀರ್, ಟಿಪ್ಪು ಸುಲ್ತಾನ್ ಮತ್ತಿತರರು ಪಾಲ್ಗೊಂಡಿದ್ದರು.