ಸಿಎಂ ಸಿದ್ದರಾಮಯ್ಯ 
ಜಿಲ್ಲೆ

ತಮ್ಮ ಕಷ್ಟ ತೋಡಿಕೊಂಡ ಸಿಎಂ..!

ಆರ್.ಕೃಷ್ಣ

ಮೈಸೂರು: ನಿಗಮ, ಮಂಡಳಿ, ಎಂಎಲ್‌ಸಿ ನೇಮಕಕ್ಕೆ ಪತ್ರ ಹಿಡಿದು ಬಂದವರ ಮುಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕಷ್ಟ ತೋಡಿಕೊಂಡರು.
ನೇಮಕ ಮಾಡಿ ಎಂದು ನಿತ್ಯ ನೂರಾರು ಜನರು ಬರುತ್ತಿದ್ದಾರೆ. ಎಷ್ಟು ಜನರಿಗೆ ಅಂತ ಕೊಡೋದು. ಎಸ್‌ಸಿ, ಎಸ್‌ಟಿ ಸೇರಿದಂತೆ ಎಲ್ಲ ವರ್ಗದವರಿಗೂ ಅವಕಾಶ ಕೊಡಬೇಕು. ಎಲ್ಲವನ್ನು ಸರಿದೂಗಿಸೋದು ಸಾಕಾಗಿದೆ. ನಮ್ಮ ಕಷ್ಟ ನಮಗಾಗಿದೆ. ಇದೆಲ್ಲಾ ನಿಮಗೆ ಅರ್ಥ ಅಗುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ನಿಗಮ, ಮಂಡಳಿಗೆ ನೇಮಕ ಮಾಡಿಕೊಡುವಂತೆ ಮನವಿ ಪತ್ರ ಹಿಡಿದು ಬಂದ ಬಸವಣ್ಣ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ರೇಗಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಷ್ಟು ಸಾರಿ ಕೊಡುತ್ತೀಯಾ, ಈಗಾಗಲೇ ನೂರು ಬಾರಿ ಕೊಟ್ಟಿದ್ದೀಯಾ ಎಂದು ಪತ್ರ ವಾಪಸ್ ತಳ್ಳಿ ಕಾರಿನಲ್ಲಿ ಮುಂದೆ ಸಾಗಿದರು.
ನಜರ್‌ಬಾದ್‌ನಲ್ಲಿರುವ ಮೈಲಾರಿ ಹೋಟೆಲ್‌ನಲ್ಲಿ ಶುಕ್ರವಾರ ದೋಸೆ ಸವಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಂಗಳೂರಿಗೆ ತೆರಳುವ ಮುನ್ನ ಶನಿವಾರ ಸಹ ಅಗ್ರಹಾರದಲ್ಲಿರುವ ಮತ್ತೊಂದು ಮೈಲಾರಿ ಹೋಟೆಲ್ಗೆ ಹೋಗಿ ದೋಸೆ, ಇಡ್ಲಿ ಸವಿದರು.