ಜಿಲ್ಲೆ

ಕೋವಿಡ್​ ಹೆಚ್ಚಿರುವ ಜಿಲ್ಲೆಗಳಿಗೆ ಸಿಎಂ ಭೇಟಿ; ಇಂದು ತುಮಕೂರಿಗೆ ಬಿಎಸ್​​ವೈ

ಬೆಂಗಳೂರು : ಇನ್ನು ಮುಂದೆ ಕೋವಿಡ್ ಹೆಚ್ಚಿರುವ ಜಿಲ್ಲೆಗಳಿಗೆ ಪ್ರತಿ ವಾರ ಅಥವಾ ಹದಿನೈದು ದಿನಕ್ಕೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುವ ಆಲೋಚನೆ ಮಾಡಿರುವುದಾಗಿ ಸಿಎಂ ಬಿ.ಎಸ್​.ಯಡಿಯೂರಪ್ಪ ಹೇಳಿದ್ದಾರೆ.

ಇಂದು ಬೆಳಿಗ್ಗೆ ತುಮಕೂರಿಗೆ ತೆರಳುವ ಮುನ್ನ ಸಿಎಂ ಈ ಹೇಳಿಕೆ ನೀಡಿದ್ದಾರೆ. ಇಂದು ತುಮಕೂರಿನಲ್ಲಿ ಕೋವಿಡ್​ ಸ್ಥಿತಿಗತಿ ಬಗ್ಗೆ ಬಿಎಸ್​​ವೈ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಶಿಕ್ಷೆಯಾಗಲಿದೆ: ಬೆಂಗಳೂರಿನಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಬಿಎಸ್​​ವೈ, "ಇದೊಂದು ಅಮಾನುಷ ಕೃತ್ಯ. ಇದನ್ನು ಯಾರೂ ಕೂಡ ಸಹಿಸೋದಿಲ್ಲ. ಇಂಥವರಿಗೆ ತಕ್ಕ ಶಿಕ್ಷೆಯಾಗಬೇಕು. ಇವರ ವಿರುದ್ದವೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ" ಎಂದಿದ್ದಾರೆ.