ಹುಮನಾಬಾದ್: ನುಡಿದಂತೆ ನಡೆಯುವ ಮೂಲಕ ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 5 ಗ್ಯಾರಂಟಿಗಳನ್ನು ಒದಗಿಸಲು ಮುಂದಾಗಿದ್ದು, ಇಡೀ ರಾಜ್ಯದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಹೇಳಿದರು.
ಪಟ್ಟಣದ ಮಾಜಿ ಸಚಿವ ರಾಜಶೇಖರ ಪಾಟೀಲ್ ನಿವಾಸದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದಿಂದ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ 76ನೇ ಜನ್ಮದಿನ ಸಂಭ್ರಮ ಕೇಕ್ ಕತ್ತರಿಸುವ ಮೂಲಕ ಆಚರಿಸಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ನೀಡಿರುವ ಭರವಸೆಯಂತೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಸ್ವೀಕರಿಸಿದ ತಕ್ಷಣವೇ ಗ್ಯಾರಂಟಿಗಳನ್ನು ಜಾರಿಗೆ ತರಲು ತಿರ್ಮಾನಿಸಿ, ಅದರಂತೆ ಈಗಾಗಲೇ 4 ಜಾರಿಗೆ ತಂದಿದ್ದು, ಇನ್ನೂ ಒಂದು ಗ್ಯಾರಂಟಿ ದಿ.5 ರಂದು ಕಲ್ಬುರ್ಗಿ ಯಲ್ಲಿ ಚಾಲನೆ ನೀಡಲಿದ್ದಾರೆ. ರಾಜ್ಯಕಂಡ ಅಪರೂಪದ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ನವರು ಒಬ್ಬರಾಗಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತಮ ಆಳಿತದ ಜತೆಗೆ 5 ಗ್ಯಾರಂಟಿ ಜಾರಿಗೆ ತಂದಿರುವುದು ರಾಜ್ಯದ ಜನರಲ್ಲಿ ಸಂತಷ ಮೂಡಿಸಿದೆ. ರೈತರ, ಮಹಿಳೆಯರ, ಯುವ ಜನತೆ, ಹಾಗೂ ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕೆ ಪಣತೋಟ್ಟು ಶ್ರಮಿಸುತ್ತಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ, ಟಿಎಪಿಸಿಎಮ್ ಎಸ್ ಅಧ್ಯಕ್ಷ ಅಭಿಷೇಕ ಪಾಟೀಲ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಅಫ್ಸರಮಿಯ್ಯಾ, ಓಂಕಾರ ತುಂಬಾ, ಕಂಟೆಪ್ಪ ದಾನಾ, ಈಶ್ವರ ಕಲ್ಬುರ್ಗಿ, ವಾಹೇದ ಬೇಗ್, ದತ್ತಕುಮಾರ ಚಿದ್ರಿ, ಸತೀಷ ರಾಂಪೂರೆ, ಶಿವರಾಜ ಚೀನಕೇರಾ, ಅಶೋಕ ಚಳಕಾಪೂರೆ, ಮುಕ್ರಾಂ, ಸುರೇಶ ಘಾಂಗ್ರೆ, ರವಿ ಘಾವಳಕರ, ಪ್ರಕಾಶ ಕಾಡಗೊಂಡ, ಅಣ್ಣರಾವ ಪಾಟೀಲ್, ಸಿದ್ರಾಮ ವಾಘಮಾರೆ, ಮಲ್ಲಿಕಾರ್ಜುನ ಶರ್ಮಾ, ಸಚಿನ್ ಮಠಮತಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಹಣ್ಣು ವಿತರಣೆ: ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನದ ಅಂಗವಾಗಿ ಇಲ್ಲಿನ ಸರಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಬ್ರೇಡ್, ಹಣ್ಞು ವಿತರಿಸಲಾಯಿತು.