ಜಿಲ್ಲೆ

ಗೃಹಜ್ಯೋತಿ ಯೋಜನೆಗೆ ಮನೆ ಮುಂದಿನ ಬಲ್ಬ್ ಬೆಳಗಿ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ; ಥಂಬ್ಸ್ ಅಫ್ ಮಾಡಿ ಸಂಭ್ರಮಿಸಿದ ಮುಖ್ಯಮಂತ್ರಿ

ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಐದು ವರ್ಷಗಳಲ್ಲಿ ಜಾರಿಗೆ ಬದ್ದ ಎಂದು ಸಿಎಂ ಘೋಷಣೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಜ್ಯ ಸರ್ಕಾರದ  ಮಹತ್ವಾಕಾಂಕ್ಷಿ ಯೋಜನೆ ಹಾಗೂ  ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಶರಣರ ಸೂಫಿ ಸಂತರ ನಾಡು ಕಲಬುರಗಿ ನಗರದ ಎನ್ ವಿ ಮೈದಾನದಲ್ಲಿ ಇಂದ ಜರುಗಿದ ಐತಿಹಾಸಿ ಸಮಾರಂಭದಲ್ಲಿ ಸಿಎಂ ಸಿದ್ದರಾಯಮಯ್ಯ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಹಾಗೂ ಎಐಸಿಸಿ ಅದ್ಯಕ್ಷ , ಮಲ್ಲಿಕಾರ್ಜುನ ಖರ್ಗೆ ಅವರು ಮನೆಯ ಮುಂದಿನ ಬಟನ್ ಒತ್ತಿ ಬಲ್ಬ್ ಬೆಳಗಿಸಿ ಚಾಲನೆ ನೀಡಿದರು. ಯೋಜನೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಅವರ ಥಂಬ್ಸ್ ಅಫ್ ಮಾಡಿ ಸಂಭ್ರಮಿಸಿದರು.

ಇದರೊಂದಿಗೆ ನಾಡಿನ ೧.೪೧ ಕೋಟಿ ಮನೆಗಳನ್ನು ಬೆಳಗಲು ಪ್ರತಿ ಮನೆಗೆ ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ಪೂರೈಕೆ ಮಾಡುವ ಯೋಜನೆಗೆ ತೊಗರಿ ನಾಡು ಚಾಲನೆ ಲಭಿಸಿತು. ಸಂಪುಟದ ಅರ್ಧ ಡಜನ್ ಸಚಿವರು ಮತ್ತು ಸಾವಿರಾರು‌ ಜನರು ಮಹತ್ವದ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು.. ಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದು ಸಿಎಂ ಹೇಳಿದರು. ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲ ಅಂಶಗಳನ್ನು ಐದು ವರ್ಷಗಳಲ್ಲಿ ಜಾರಿಗೊಳಿಸುತ್ತೇವೆ ಎಂದು ಘೋಷಿಸಿದರು.

ಗೃಹಜ್ಯೋತಿಗೆ ಚಾಲನೆ ನೀಡಿದ ಬಳಿಕ ವೇದಿಕೆಯಲ್ಲಿ ಹತ್ತು ಜನ ಫಲಾನುಭವಿಗಳಿಗ ಶೂನ್ಯ ಬಿಲ್ ವಿತರಿಸಿದರು. ಇಂಧನ ಸಚಿವ ಕೆ.ಜೆ.ಜಾರ್ಜ್ ದಿಕ್ಸೂಚಿ ಭಾಷಣ ಮಾಡಿದರು. ವೈದಕ್ಯೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ,ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಇಂಧನ ಸಚಿವ ಕೆ.ಜೆ.ಜಾರ್ಜ್ , ಸಚಿವರಾದ ಈಶ್ಚರ ಖಂಡ್ರೆ, ಶರಣಬಸಪ್ಪ ದರ್ಶನಾಪುರ, ರಹಿಮಖಾನ್, ಶಾಸಕರಾದ ಬಿ.ಆರ್.ಪಾಟೀಲ್, ಎಂ.ವೈ.ಪಾಟೀಲ್, ರಾಜಾವೆಂಕಟಪ್ಪ ನಾಯಕ, ಕನ್ನಿಜ್ ಫಾತಿಮಾ, ತಿಪ್ಪಣ್ಣಪ್ಪ ಕಮಕನೂರ, ಅರವಿಂದ ಅರಳಿ, ಗೋವಿಂದರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಇಂದನ ಇಲಾಖೆ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಚೇತನ ಆರ್., ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ, ಜಿಪಂ ಸಿಇಒ ಭಂವಾರ್‌ಸಿಂಗ್ ಮೀನಾ, ಡಿಸಿಪಿ ಅಡ್ಡೂರು ಶ್ರೀನಿವಾಸಲು,ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ , ಕೆಕೆಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಷಪ್ಪ, ಮಾಜಿ ಸಚಿವ ರೇವೂ ನಾಯಕ ಬೆಳಮಗಿ, ಮುಖಂಡರಾದ ನೀಲಕಂಠ ಮೂಲಗೆ, ಸುಭಾಷ ರಾಠೋಡ ಮೊದಲಾದವರಿದ್ದರು.