ಜಿಲ್ಲೆ

ದಿಢೀರ್​ ಕರೆದ ಸಚಿವ ಸಂಪುಟ ಸಭೆ ರದ್ದು; ಸಿಎಂ ಮುಂದಿನ ನಡೆ ಏನು ಗೊತ್ತಾ?

 ಬೆಂಗಳೂರು: ಇಂದು ಬೆಳ್ ಬೆಳಗ್ಗೆನೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬೆಳವಣಿಗೆಯಾಗಿದೆ. ರಾಜ್ಯಪಾಲರು ಮೂಡಾ ಅಕ್ರಮ  ಪ್ರಕರಣದಲ್ಲಿ ಮಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟ ಬೆನ್ನಲ್ಲೇ ಕಾಂಗ್ರೆಸ್​​ನಲ್ಲಿ ತಳಮಳ ಸೃಷ್ಟಿಯಾಗಿದೆ.  ಇಂದು ಸಂಜೆ 5.30ಕ್ಕೆ ಕರೆದಿದ್ದ ದಿಢೀರ್ ಸಚಿವ ಸಂಪುಟ ಸಭೆಯನ್ನ ಕಾಂಗ್ರೆಸ್ ಸರ್ಕಾರ ಅಷ್ಟೇ ದಿಢೀರ್ ಆಗಿ ರದ್ದುಗೊಳಿಸಿದೆ.

ಸಚಿವ ಸಂಪುಟ ಸಭೆಯಲ್ಲಿ ಪ್ರಾಸಿಕ್ಯೂಷನ್ ವಿಚಾರವಾಗಿ ಪಕ್ಷ ತೆಗೆದುಕೊಳ್ಳಬೇಕಾದ ನಿಲುವುಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇತ್ತು. ಆಧರೆ ಇದೀಗ  ಸಚಿವ ಸಂಪುಟ ಸಭೆಯನ್ನ ಕಾಂಗ್ರೆಸ್ ಸರ್ಕಾರ ಅಷ್ಟೇ ದಿಢೀರ್ ಆಗಿ ರದ್ದುಗೊಳಿಸಿದೆ. ಡಿಸಿಎಂ ನೇತೃತ್ವದಲ್ಲಿ ಇಂದು ಎಲ್ಲ ಸಚಿವರು  ರಾಜ್ಯಪಾಲರ ಭೇಟಿಗೆ ಹೋಗಿಲಿದ್ದಾರೆ. ರಾಜ್ಯಪಾಲರ ಜೊತೆ ಚರ್ಚೆ ನಡೆಸಲಿದ್ದು ಬಳಿಕ ಮುಂದಿನ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದಾರೆ.

ಈಗಾಗಲೇ ಸಿಎಂ ಸಿದ್ದರಾಮಯ್ಯಗೆ ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಉಸ್ತುವಾರಿ ಸುರ್ಜೇವಾಲ ಕರೆ ಮಾಡಿ ನಾವು ನಿಮ್ಮೊಂದಿಗಿದ್ದೇವೆ ಧೈರ್ಯವಾಗಿರಿ ಎಂದು ಭರವಸೆ ನೀಡಿದ್ದಾರೆ. ಹೈಕಮಾಂಡ್ ಅಂಗಳದಿಂದ ಕರೆ ಬಂದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರ ತನ್ನ ಸಚಿವ ಸಂಪುಟ ಸಭೆಯನ್ನು ರದ್ದುಗೊಳಿಸಿದೆ.