ಜಿಲ್ಲೆ

ಗದಗ:ಲ್ಯಾಂಡಿಂಗ್​ ಸಂದರ್ಭದಲ್ಲಿ ಗೊಂದಲ

Gadag - Shivanand Hiremath

ಗದಗ: ನಗರದಲ್ಲಿ ಭಾನುವಾರ ಬಾಲಕಿಯರ ಬಾಲ ಮಂದಿರ ಉದ್ಘಾಟನೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಇದ್ದ ಹೆಲಿಕಾಪ್ಟರ್​ ಲ್ಯಾಂಡಿಂಗ್​ ಸಂದರ್ಭದಲ್ಲಿ ಸ್ವಲ್ಪ ಗೊಂದಲ ಸೃಷ್ಟಿಯಾಯಿತು. ಜಿಲ್ಲಾಡಳಿತ ಭವನ ಹಿಂಭಾಗದಲ್ಲಿ ಎರಡು ಹೆಲಿಪ್ಯಾಡ್​ ಲ್ಯಾಂಡಿಂಗ್​ ಇದ್ದುದ್ದರಿಂದ ಪೈಲೆಟ್​ಗೆ ಗೊಂದಲ ಸೃಷ್ಟಿಯಾಗಿತ್ತು. ಮೊದಲನೇ ಹೆಲಿಪ್ಯಾಡ್​ಗೆ ಇಳಿಸುವ ಸಂದರ್ಭದಲ್ಲಿ ಪೈಲೆಟ್​ಗೆ ತಪ್ಪಿನ ಅರಿವಾಗಿ ಜಿಲ್ಲಾಡಳಿತ ಸೂಚಿಸಿದ ಎರಡನೇ ಹೆಲಿಪ್ಯಾಡ್​ಗೆ ಹೆಲಿಕಾಪ್ಟರ್​ ಇಳಿಸಲಾಯಿತು.