ಜಿಲ್ಲೆ

ಪ್ರತಿಕೂಲ ಹವಾಮಾನ; ಸಿಎಂ ಯಡಿಯೂರಪ್ಪ ದಾವಣಗೆರೆ ಪ್ರವಾಸ ರದ್ದು..

vinaymk1969

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ದಾವಣಗೆರೆ ಪ್ರವಾಸ ರದ್ದಾಗಿದೆ. ಪೂರ್ವನಿಗದಿಯಂತೆ ಇಂದು ಅವರು ದಾವಣಗೆರೆ ಪ್ರವಾಸ ಕೈಗೊಳ್ಳಬೇಕಿದ್ದು, ಬೆಳಗ್ಗೆ 11.15ಕ್ಕೆ ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ಬರಬೇಕಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಬಿಎಸ್​ವೈ ಅವರ ದಾವಣಗೆರೆ ಪ್ರವಾಸ ರದ್ದು ಮಾಡಲಾಗಿದೆ ಎಂದು ಸಿಎಂ ಅವರ ವಿಶೇಷ ಕರ್ತವ್ಯಾಧಿಕಾರಿ ಬಿ.ಪಿ.ಚನ್ನಬಸವೇಶ ತಿಳಿಸಿದ್ದಾರೆ.

ಚುನಾವಣಾ ಪ್ರಚಾರ: ತುಮಕೂರಿನಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಪರ ಪ್ರಚಾರಾರ್ಥ ಮಧ್ಯಾಹ್ನ 2.30ರ ಸುಮಾರಿಗೆ ನಗರದ ವಿನಾಯಕ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಭಾಗಿ ಆಗಲಿದ್ದಾರೆ.