ಮೈಸೂರಿನ ಸಿಎಂ ಕಪ್ ಕ್ರೀಡಾಕೂಟದಲ್ಲಿ ವಿಜೇತರಾದ ಪುರುಷ ವಿಭಾಗದ ತಂಡ 
ಜಿಲ್ಲೆ

ಸಿಎಂ ಕಪ್ ಕ್ರೀಡಾಕೂಟ ವಿಜೇತರು

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮೈಸೂರಿನ ಅರಮನೆ ಮೈದಾನದಲ್ಲಿ ದಸರಾ ಉತ್ಸವ ಅಂಗವಾಗಿ ಅ.3 ರಿಂದ 6 ರ ವರೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ದಸರಾ ಸಿಎಂ ಕಪ್ 2024ರ ಕ್ರೀಡಾಕೂಟದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಿ ಹ್ಯಾಂಡ್‌ಬಾಲ್ ಮತ್ತು ನೆಟ್‌ಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಜಿಲ್ಲೆಯ ಪುರುಷರ ವಿಭಾಗದ ನೆಟ್ಬಾಲ್ ಕ್ರೀಡೆಯಲ್ಲಿ ಪವನ್‌ಕುಮಾರ್‌ತಂಡವು ಪ್ರಥಮ ಸ್ಥಾನ, ಹ್ಯಾಂಡ್‌ಬಾಲ್ ಪುರುಷರ ವಿಭಾಗದಲ್ಲಿ ಸುನಿಲ್ ಹಾಗೂ ತಂಡ ಪ್ರಥಮ ಸ್ಥಾನ ಮತ್ತು ಹಾಕಿ ಮಹಿಳಾ ವಿಭಾಗದಲ್ಲಿ ಮುನಿರತ್ನಮ್ಮ ತಂಡ ದ್ವೀತಿಯ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿ ವಿಜೇತ ತಂಡಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ವತಿಯಿಂದ ಅಭಿನಂದಿಸಿದ್ದಾರೆ.