ಜಿಲ್ಲೆ

ಸಿಎಂ ಕುರ್ಚಿ ಖಾಲಿ ಇಲ್ಲ

ನರೇಶ್ ಕುಮಾರ್

ಬಳ್ಳಾರಿ: ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಹೇಳಿಯೇ ಇಲ್ಲ. ಭಾರತದಲ್ಲಿ ಅಂತಹ ಹೇಳಿಕೆ ನೀಡಿದವರನ್ನು ಗಲ್ಲಿಗೇರಿಸಿದರೂ ತಪ್ಪಿಲ್ಲ ಎಂದು ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರಕ್ಕೆ ನೂರರಷ್ಟು ಪಾಕಿಸ್ತಾನ ಪರ ಘೋಷಣೆ ಹೇಳಿಲ್ಲ. ಅದನ್ನು ಕೆಲವರು ಎಡಿಟ್ ಮಾಡಿ, ಮ್ಯಾನ್‌ಪ್ಲೇಟ್ ಮಾಡಿದ್ದಾರೆ. ಪ್ರಕರಣದ ಎಫ್‌ಎಸ್‌ಎಲ್ ವರದಿ ಬಂದಿಲ್ಲ ಎಂದರು. ಆರೋಪಿಗಳನ್ನು ಬಂಧನ ಮಾಡಲಾಗಿದೆಯಲ್ಲ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವುದು ಸಾಮಾನ್ಯ ಎಂದರು.

ಕೋಲಾರದಲ್ಲಿ ರಾಹುಲ್ ಗಾಂಧಿ ಬಾಯಿಂದ ಬಂದ ಸಿಎಂ ಶಿವಕುಮಾರ್ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ನಾಗೇಂದ್ರ, ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ನಮ್ಮ ನಾಯಕರು ಯಾವ ಕಾರಣಕ್ಕೆ ಹೇಳಿದ್ದಾರೆಂಬುದು ಗೊತ್ತಿಲ್ಲ. ಮಂತ್ರಿ ಆದವರಿಗೆ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಸಾಮಾನ್ಯ. ಡಿ.ಕೆ.ಶಿವಕುಮಾರ್ ಕೂಡಾ ಸಮರ್ಥ ನಾಯಕರು. ಸಿಎಂ ಆಗುವ ಅರ್ಹತೆ ಅವರಿಗಿದೆ. ಸದ್ಯಕ್ಕೆ ಸಿಎಂ ಬದಲಾವಣೆ ಚರ್ಚೆ ನಡೆದಿಲ್ಲ ಎಂದು ಹೇಳಿದರು.