ಜಿಲ್ಲೆ

ಬರುತ್ತಿಲ್ಲ ನಿರೀಕ್ಷಿಸಿದಷ್ಟು ದೇಣಿಗೆ: ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ 164 ಕೋಟಿ ರೂ. ಸಂಗ್ರಹ

ಬೆಂಗಳೂರು: ಕರೊನಾ ವಿರುದ್ಧ ಸಮರ ಸಾರಿರುವ ರಾಜ್ಯ ಸರ್ಕಾರಕ್ಕೆ ಕೊಡುಗೈ ದಾನಿಗಳ ನೆರವು ಬೇಕಿದೆ. ಕರೊನಾ ವೈರಸ್ ತಡೆಗೆ ಆರಂಭಿಸಿರುವ ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆಗೆ (ಸಿಎಂಆರ್​ಎಫ್ ಕೋವಿಡ್-19) ಈವರೆಗೆ ನಿರೀಕ್ಷಿತ ಮಟ್ಟದಲ್ಲಿ ದೇಣಿಗೆ ಬಂದಿಲ್ಲ. ಈವರೆಗೆ ಸಿಎಂಆರ್​ಎಫ್ ಕೋವಿಡ್-19ಗೆ 134 ಕೋಟಿ ರೂ. ಹಾಗೂ ಕಂದಾಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣೆ ಪ್ರಾಧಿಕಾರಕ್ಕೆ 30 ಕೋಟಿ ರೂ. ಸೇರಿ ಒಟ್ಟು 164 ಕೋಟಿ ರೂ. ಮಾತ್ರ ಬಂದಿದೆ.

ಮಾ.23ರಂದು ಸಿಎಂಆರ್​ಎಫ್ ಕೋವಿಡ್-19 ಆರಂಭಿಸಲಾಯಿತು. ಆರಂಭದಲ್ಲಿ ನೆಫ್ಟ್ ಹಾಗೂ ಆರ್​ಟಿಜಿಎಸ್ ಮೂಲಕ ದೇಣಿಗೆ ನೀಡುವಂತೆ ಕೋರಲಾಯಿತು. ಬಳಿಕ ಗೂಗಲ್ ಪೇ, ಫೋನ್​ಪೇ, ಪೇಟಿಎಂ, ಚೆಕ್, ಇಂಟರ್​ನೆಟ್ ಬ್ಯಾಂಕಿಂಗ್ ಸೇರಿ ಆನ್​ಲೈನ್ ಮೂಲಕ ದೇಣಿಗೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಮಾ.30ರ ಬಳಿಕ ಹೆಚ್ಚು ದೇಣಿಗೆ ಬರಲು ಬರಲಾರಂಭಿಸಿತಾದರೂ ಇದೀಗ ಕಡಿಮೆಯಾಗುತ್ತಿದೆ.

ಆನ್​ಲೈನ್​ನಲ್ಲಿ ದೇಣಿಗೆ ನೀಡಿದವರಿಗೆ ತಕ್ಷಣ ರಸೀದಿ ಸ್ವೀಕೃತಿಯಾಗಲಿದೆ. ಅಲ್ಲದೆ, ಸಿಎಂ ಕಚೇರಿಯಿಂದ ಅಭಿನಂದನಾ ಪತ್ರ ನೀಡಲಾಗುತ್ತದೆ. ದೇಣಿಗೆ ನೀಡುವಂತೆ ಅನಿವಾಸಿ ಕನ್ನಡಿಗರಿಗೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಅಮೆರಿಕ, ಜರ್ಮನಿ, ಬ್ರಿಟನ್, ಫ್ರಾನ್ಸ್, ಆಸ್ಟ್ರೇಲಿಯಾ ಮತ್ತಿತರರ ದೇಶಗಳಲ್ಲಿರುವ ಕನ್ನಡಿಗರು ಮಾನವೀಯ ದೃಷ್ಟಿಯಲ್ಲಿ ದೇಣಿಗೆ ನೀಡುವಂತೆ ಕೋರಿದ್ದಾರೆ.

ಈವರೆಗೆ ಹೆಚ್ಚು ದೇಣಿಗೆ ಕೊಟ್ಟವರು

  • ಕೆಪಿಟಿಸಿಎಲ್: -ಠಿ;25 ಕೋಟಿ
  • ಕೆಪಿಟಿಸಿಎಲ್ ನಿಗಮ: -ಠಿ;18 ಕೋಟಿ
  • ಅಪೆಕ್ಸ್ ಬ್ಯಾಂಕ್: -ಠಿ;5 ಕೋಟಿ
  • ಕೆಎಂಎಫ್: -ಠಿ;5 ಕೋಟಿ
  • ಕರ್ನಾಟಕ ವಿದ್ಯುತ್ ನಿಗಮ ನಿಯಮಿತ: -ಠಿ;5 ಕೋಟಿ
  • ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ: -ಠಿ;3 ಕೋಟಿ
  • ಪಿಇಎಸ್ ಯೂನಿರ್ವಸಿಟಿ: -ಠಿ;3 ಕೋಟಿ
  • ಎಸ್​ಟಿಆರ್​ಆರ್ ಯೋಜನಾ ಪ್ರಾಧಿಕಾರ: -ಠಿ;3 ಕೋಟಿ
  • ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ: -ಠಿ;3 ಕೋಟಿ
  • ನೆಲಮಂಗಲ ಯೋಜನಾ ಪ್ರಾಧಿಕಾರ: -ಠಿ;2.5 ಕೋಟಿ
  •  ಕರ್ನಾಟಕ ಗೃಹ ಮಂಡಳಿ: -ಠಿ;2.5 ಕೋಟಿ
  • ರಾಜ್ಯ ಸಹಕಾರ ಮಹಾಮಂಡಳ: -ಠಿ;2 ಕೋಟಿ
  • ಗೋಕುಲ ಶಿಕ್ಷಣ ಪ್ರತಿಷ್ಠಾನ: -ಠಿ;2 ಕೋಟಿ
  • ಅನೇಕಲ್ ಯೋಜನಾ ಪ್ರಾಧಿಕಾರ: -ಠಿ;2 ಕೋಟಿ

ತೆರಿಗೆಯಲ್ಲಿ ವಿನಾಯಿತಿ

ಸಿಎಂಆರ್​ಎಫ್ ಕೋವಿಡ್-19 ಖಾತೆಗೆ ಶಿಕ್ಷಣ ಸಂಸ್ಥೆಗಳು, ನಟ-ನಟಿಯರು, ಕಾಪೋರೇಟ್ ಸಂಸ್ಥೆಗಳು, ಸಹಕಾರ ಬ್ಯಾಂಕ್, ಜನಪ್ರತಿನಿಧಿಗಳು ದೇಣಿಗೆ ನೀಡಿದರೆ ತೆರಿಗೆ ವಿನಾಯಿತಿ ಹಾಗೂ ಸಿಎಸ್​ಆರ್ ಅಡಿ ವಿನಾಯಿತಿ ಸಿಗಲಿದೆ. ಕಾಪೋರೇಟ್ ಸಂಸ್ಥೆಯ ಉದ್ಯೋಗಿಗಳು ತಮ್ಮ ಒಂದು ದಿನದ ವೇತನ ನೀಡಿದರೂ ತೆರಿಗೆ ವಿನಾಯಿತಿ ದೊರೆಯಲಿದೆ.

ಶ್ರೀಮಂತರಿಗೆ ಮನವಿ

ಶಾಲಾಮಕ್ಕಳು, ಮಸಣದಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಡವರು ಕೂಡ ದೇಣಿಗೆ ನೀಡಿ ಮಾದರಿಯಾಗುತ್ತಿದ್ದಾರೆ. ಆದರೆ, ಕೋಟಿಗಟ್ಟಲೆ ಹಣ ಹೊಂದಿರುವ ಶ್ರೀಮಂತರು ನಿರಾಸಕ್ತಿ ತೋರುತ್ತಿದ್ದಾರೆ.ಅವರು ಹೆಚ್ಚೆಚ್ಚು ದೇಣಿಗೆ ನೀಡುವಂತೆ ಸರ್ಕಾರ ಮನವಿ ಮಾಡಿದೆ.