ಜಿಲ್ಲೆ

ಜೇನು ಕಚ್ಚಿಸಿಕೊಂಡು, ಜೇನು ತುಪ್ಪವನ್ನು ಎಸ್ಸಿ, ಎಸ್ಟಿ ಜನರಿಗೆ ಕೊಟ್ಟಿರುವೆ ಎಂದ ಬೊಮ್ಮಾಯಿ

ಡಾ.ಶ್ರೀಹರ್ಷ ಸೋರಲಮಾವು

ಕೊರಟಗೆರೆ : ನಾನು ಜೇನು ಕಚ್ಚಿಸಿಕೊಂಡು, ಜೇನು ತುಪ್ಪವನ್ನು ಎಸ್ಸಿ , ಎಸ್ಟಿ ಜನರಿಗೆ ಕೊಟ್ಟಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ ಬೊಮ್ಮಾಯಿ ಅವರು, ಸಾಮಾಜಿಕ ನ್ಯಾಯ ಅಂತಾ ಯಾವಾಗಲೂ ಸಿದ್ದರಾಮಯ್ಯ ಅಬ್ಬರಿಸುತ್ತಿರುತ್ತಾರೆ, ಎಲ್ಲಿದೆ ನ್ಯಾಯ? ಘೋರ ಅನ್ಯಾಯ ನಡೀತಾ ಇದೆ. ಸಿದ್ದರಾಮಯ್ಯ ಸಾಮಾಜಿಕ ನ್ಯಾಯದಲ್ಲಿ ಸದೃಢರಾದರು. ಆದರೆ, ಬಡವರನ್ನು ಬಡವರಾಗಿಯೇ ಉಳಿಸಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಬೊಮ್ಮಾಯಿ ಅವರೇ ಮೀಸಲಾತಿ ಹೆಚ್ಚಿಸೋಕೆ ಕೈ ಹಾಕಬೇಡಿ ಅದೊಂದು ಜೇನು ಗೂಡು, ಅಲ್ಲಿಗೆ ಕೈ ಹಾಕಬೇಡಿ, ಜೇನು ಕಚ್ಚುತ್ತೆ ಎಂದು ಸಾಮಾಜಿಕ ಹರಿಕಾರ ಸಿದ್ದರಾಮಯ್ಯ ಸಲಹೆ ನೀಡಿದ್ದರು. ಆದರೂ ನಾನು ಮೀಸಲಾತಿ ಹೆಚ್ಚಿಸಿದೆ. ನಾನು ಜೇನು ಕಚ್ಚಿಸಿಕೊಂಡು, ಜೇನು ತುಪ್ಪವನ್ನ ಎಸ್ಸಿ ಎಸ್ಟಿಗೆ ಕೊಟ್ಟಿದ್ದೇನೆ. ನಾನು ಹಾಗೂ ನನ್ನ ಬಿಜೆಪಿ ಸರ್ಕಾರ ಮಾಡಿರುವುದು ಸಾಮಾಜಿಕ ನ್ಯಾಯ ಎಂದು ಟಾಂಗ್ ಕೊಟ್ಟರು.