ಜಿಲ್ಲೆ

5500 ಕೋಟಿ ರೂನೀರಾವರಿ ಯೋಜನೆಗಳಿಗೆ ಅನುಮೋದನೆ


ಬೆಳಗಾವಿ; ಕಳೆದ ಮೂರು ತಿಂಗಳಲ್ಲಿ 5500 ಕೋಟಿ ರೂ.ಗಳಿಗೂ ಹೆಚ್ಚು ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಿ.  ಚಾಲನೆಯನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುವರ್ಣ ವಿಧಾನಸೌಧದ  ಆವರಣದಲ್ಲಿ ಆಯೋಜಿಸಿರುವ  ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ  ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಡಾ : ಬಿ.ಆರ್. ಅಂಬೇಡ್ಕರ್ ಅವರ  ಪ್ರತಿಮೆಗಳನ್ನು ಅನಾವರಣಗೊಳಿಸಿ ಮಾತನಾಡಿದರು.
ಈ ಬಾರಿಯ ಬಜೆಟ್ ನಲ್ಲಿ ಕಿತ್ತೂರು  ಅಭಿವೃದ್ಧಿ ಪ್ರಾಧಿಕಾರ ರಚಿಸಲು ಅವಕಾಶ ಕಲ್ಪಿಸಲಾಗಿದೆ.ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲು ತೀರ್ಮಾನ. ಮಾಡಲಾಗಿದೆ. ಈ ಭಾಗದ ಬೃಹತ್ ಯೋಜನೆಗಳು ಹಾಗೂ  ಅಭಿವೃದ್ಧಿಗೆ ಅಗತ್ಯವಿರುವ  ವಿಶೇಷ ಅನುದಾನ ಹಾಗೂ ಕಾರ್ಯನೀತಿಯನ್ನು ರೂಪಿಸಲು  ಮಂಡಳಿ ಕೆಲಸ ಮಾಡಲಿದೆ.  ಕಿತ್ತೂರು ಕರ್ನಾಟಕ ಕೃಷಿ, ನೀರಾವರಿ, ಕೃಷಿ ಆಧಾರಿತ ಉದ್ಯಮಗಳಿಗೆ, ಸಕ್ಕರೆ ಕಾರ್ಖಾನೆಗಳಿಗೆ, ಇತರೆ  ವ್ಯವಹಾರಕ್ಕೆ, ಶೈಕ್ಷಣಿಕ ಕೇಂದ್ರಗಳಿಗೆ ಅತ್ಯಂತ ಹೆಸರುವಾಸಿ. ಸಮೃದ್ಧ ನಾಡನ್ನು ಯೋಜನಾಬದ್ಧವಾಗಿ ಇನ್ನಷ್ಟು ಅಭಿವೃದ್ಧಿ ಮಾಡಿ ಈ ಭಾಗಕ್ಕೆ ದೊರೆಯಬೇಕಾದ ಎಲ್ಲಾ ಬೃಹತ್  ಯೋಜನೆಗಳನ್ನು, ಮೂಲಸೌಲಭ್ಯ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳನ್ನು ತರುವ ಮೂಲಕ ನಿರಂತರವಾಗಿ ಅಭಿವೃದ್ಧಿ ಸಮೃದ್ದಿ ಆಗಲಿ ಎಂದು ಹಲವಾರು ಕಾರ್ಯಕ್ರಮಗಳನ್ನು  ರೂಪಿಸಲಾಗಿದೆ ಎಂದರು.