ಹುಬ್ಬಳ್ಳಿ: ಹಾವೇರಿ ಜಿಲ್ಲೆ ಕೊರಡೂರು ಗ್ರಾಮದ ನಿವೃತ್ತ ಸೈನಿಕ, ಪ್ರಸ್ತುತ ಅಗ್ನಿಶಾಮಕರಾಗಿ ಸೇವೆ ಸಲ್ಲಿಸುತ್ತಿರುವ ಬಸಪ್ಪ ಎಸ್. ಕೊಪ್ಪದ ಅವರು ಕರ್ತವ್ಯ ನಿಷ್ಠೆ, ದಕ್ಷತೆಗಾಗಿ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ಸದ್ಯ ಹುಬ್ಬಳ್ಳಿ ಪಟ್ಟಣ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಸಪ್ಪ ಅವರಿಗೆ
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೃಹ ಮಂತ್ರಿ ಡಾ. ಜಿ. ಪರಮೇಶ್ವರ ಅವರು ಸಿಎಂ ಪದಕ ಪ್ರದಾನ ಮಾಡಿದರು.