ಜಿಲ್ಲೆ

ಸಿಎಂ ಆಗ್ತಾರೆ ಎಂಬುದೆಲ್ಲಾ ಇಲ್ಲ ಬನ್ರಿ… !!

ತುಮಕೂರು: ಸಿಎಂ ಸಿದ್ದರಾಮಯ್ಯ ಅವರು ನಮ್ಮ ಮನೆಗೆ ಶುಕ್ರವಾರ ರಾತ್ರಿ ಸೌಜನ್ಯದ ಭೇಟಿ ನೀಡಿದ್ದು ಒಟ್ಟಿಗೆ ಊಟ ಮಾಡಿದ್ವಿ. ಅದರ ಹೊರತಾಗಿ ಬೇರೇನೂ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.

ನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಶನಿವಾರ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಜತೆ ನಿಗಮ ಮಂಡಳಿ ವಿಚಾರವಾಗಲಿ, ಯಾವ ವಿಚಾರವಾಗಿಯೂ ಚರ್ಚೆ ಆಗಲಿಲ್ಲ. ಪರಮೇಶ್ವರ್ ಸಿಎಂ ಆಗ್ತಾರೆ ಎಂಬುದೆಲ್ಲಾ ಇಲ್ಲ ಬನ್ರಿ, ಸುಮ್ಮನೆ ಅವೆಲ್ಲಾ ಮಾತನಾಡಬಾರದು ಎಂದು ತಳ್ಳಿಹಾಕಿದರು.

ಕೆಎನ್‌ಆರ್ ಅಭ್ಯರ್ಥಿ ಆಗಬಾರದಾ?: ಸಹಕಾರ ಸಚಿವ ಕೆ.ಎನ್.ರಾಜಣ್ಣ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ರಾಜಣ್ಣ ಅಭ್ಯರ್ಥಿ ಆಗಬಾರದಾ ಎಂದು ಪರಮೇಶ್ವರ ಪತ್ರಕರ್ತರಿಗೆ ಮರು ಪ್ರಶ್ನೆ ಹಾಕಿದರು.

ತುಮಕೂರು ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಜಾಸ್ತಿ ಆಗುತ್ತಿದ್ದು ಕೊಲೆ ಪ್ರಕರಣಗಳಲ್ಲಿ ಭಾಗಿಯಾದವರನ್ನು ಬಂಧಿಸುತ್ತೇವೆ. ಕಾನೂನಿನಲ್ಲಿ ಯಾವ ರೀತಿ ಕ್ರಮ ತಗೆದುಕೊಳ್ಳಬೇಕೊ ಅದನ್ನು ತೆಗೆದುಕೊಳ್ಳುತ್ತೀವಿ ಎಂದರು.