:
ಕಲಬುರಗಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವಾನ್ವಿತ ರಾಷ್ಟçಪತಿಯವರ ಬಗ್ಗೆ ಏಕವಚನ ಬಳಸಿ ಅಪಮಾನ ಮಾಡಿರುವುದನ್ನು ಬಿಜೆಪಿ ರಾಜ್ಯ ವೈದ್ಯರ ಪ್ರಕೋಷ್ಠದ ವಕ್ತಾರೆ ಡಾ.ಸುಧಾ ಹಾಲಕಾಯಿ ಖಂಡಿಸಿದ್ದಾರೆ.
ಸಿಎಂ ಮಾತು ಎಲ್ಲರ ಮನಸ್ಸಿಗೆ ನೋವನ್ನುಂಟು ಮಾಡಿದೆ. ಪ್ರಜಾತಂತ್ರದಲ್ಲಿ ಪರಸ್ಪರ ಗೌರವ ಕೊಡುವುದೇ ಸಂವಿಧಾನದ ಮೂಲ ಆಶಯವಾಗಿದೆ. ದಲಿತ ಮಹಿಳೆಯೊಬ್ಬರು ರಾಷ್ಟçಪತಿ ಹುದ್ದೆಗೆ ಏರಿದ ಬಳಿಕವೂ ಅವರ ಬಗ್ಗೆ ಅಸಂಸದೀಯವಾಗಿ ಏಕವಚನದಲ್ಲಿ ಮಾತನಾಡಿರುವುದು ಸಂಸ್ಕೃತಿಗೆ ತಕ್ಕುದಲ್ಲ ಎಂದು ತಿಳಿಸಿದ್ದಾರೆ.