filter: null; fileterIntensity: null; filterMask: null; brp_mask:0; brp_del_th:null; brp_del_sen:null; delta:null; module: remosaic;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40; 
ಜಿಲ್ಲೆ

ಕಲೆ ಉಳಿಸಿ ಬೆಳೆಸಲು ವೇದಿಕೆ ಅವಶ್ಯ

ಬಾಬುರಾವ ಯಡ್ರಾಮಿ

ಶಿವಶಂಕ್ರಯ್ಯ ಸ್ವಾಮಿ ಇಮಡಾಪುರ ಅನಿಸಿಕೆ | ಆಡಕಿಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ವಿಜಯವಾಣಿ ಸುದ್ದಿಜಾಲ ಸೇಡಂ
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಎನ್ನುವುದು ಮಾಯವಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಪಠ್ಯದೊಂದಿಗೆ ಒಂದಿಷ್ಟು ಉತ್ತಮ ಗುಣಗಳನ್ನು ಬೆಳೆಸುವ ಕೆಲಸ ಆಗಬೇಕಿದೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಶಂಕ್ರಯ್ಯಸ್ವಾಮಿ ಇಮಡಾಪುರ ಹೇಳಿದರು.
ಆಡಕಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಕಲೆ ಹಾಗೂ ಕಲಾವಿದರನ್ನು ಉಳಿಸುವ, ಬೆಳೆಸುವುದಕ್ಕೆ ಸೂಕ್ತ ವೇದಿಕೆಗಳು ಅವಶ್ಯವಾಗಿವೆ. ಅಂತಹ ಕೆಲಸವೂ ಪ್ರತಿಭಾ ಕಾರಂಜಿ ಮೂಲಕ ನಡೆಯುತ್ತಿದೆ ಎಂದರು.
ಗ್ರಾಮೀಣ ಸೊಗಡಿನ ಜಾನಪದ ನೃತ್ಯ ಮತ್ತು ಗಾಯನ, ಚಿತ್ರಕಲೆ, ಪ್ರಬಂಧ, ಚರ್ಚಾ ಸ್ಪರ್ಧೆ, ಏಕಾಪಾತ್ರಾಭಿನಯ, ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಸೇರಿದಂತೆ ಕಲಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಭಾ ಕಾರಂಜಿ ವ್ಯಾಪ್ತಿಯಲ್ಲಿವೆ. ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿನ ಕಲಾಭಿರುಚಿಯ ಸಾಮರ್ಥ್ಯ ಸಾಬೀತು ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ಸಿಆರ್‌ಪಿ ಭೀಮಪ್ಪ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಮಹಾದೇವಪ್ಪ ಡಬ್ಬು ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಶಾಮಪ್ಪ ದುದ್ಯಾಲ ಅಧ್ಯಕ್ಷತೆ ವಹಿಸಿದ್ದರು. ನಂದಾದೀಪ ಸೇವಾ ಸಂಸ್ಥೆ ಅಧ್ಯಕ್ಷ ಸಿದ್ದಯ್ಯಸ್ವಾಮಿ ಚಿಕ್ಕಮಠ ಸರಸ್ವತಿ ಪೂಜೆ ನೆರವೇರಿಸಿದರು.
ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ಮಲ್ಕಪ್ಪ ಬಿರಾದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಸಾಗರ, ಬಿಆರ್‌ಪಿ ಉಮಾಕಾಂತ ರಾಂಪೂರ, ಮುಖ್ಯಗುರು ವೆಂಕಟೇಶ ಬಡಿಗೇರ, ಶಿಕ್ಷಕಿ ಚಂದ್ರಕಲಾ ಪಾಟೀಲ್ ಇತರರಿದ್ದರು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕಿ ಯಾಸ್ಮಿನ್ ಬೇಗಂ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ಪದ್ಮಾಲತಾ ಸ್ವಾಗತಿಸಿದರು. ಗುರು ಹೂಗಾರ ನಿರೂಪಣೆ ಮಾಡಿದರು. ಅಂಬಿಕಾ ವಂದಿಸಿದರು.