ಜಿಲ್ಲೆ

ಅಮರನಾಥದಲ್ಲಿ ಮೇಘಸ್ಫೋಟ: ಬಂಟ್ವಾಳದ 30 ಯಾತ್ರಿಕರ ತಂಡ ಸೇಫ್, ನಾಳೆ ಸಿಗಲಿದೆ ದರ್ಶನ ಭಾಗ್ಯ

ಮಂಗಳೂರು: ಅಮರನಾಥದಲ್ಲಿ ಭಾರೀ ಮೇಘಸ್ಪೋಟದಲ್ಲಿ ಹಲವು ಸಾವು ನೋವು ಸಂಭವಿಸಿದ್ದು, ಸದ್ಯ ಬಂಟ್ವಾಳದಿಂದ ತೆರಳಿದ್ದ 30 ಯಾತ್ರಿಕರ ತಂಡ ಸುರಕ್ಷಿತವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಿಂದ 30 ಯುವಕರ ತಂಡ ಅಮರನಾಥ ಯಾತ್ರೆ ಕೈಗೊಂಡಿದ್ದು, ಸದ್ಯ ಅಲ್ಲಿ ಸಂಭವಿಸಿರುವ ಅಪಾಯದಿಂದ ಪಾರಾಗಿದ್ದಾರೆ. ಮೇಘಸ್ಫೋಟ ಸಂಭವಿಸಿದ ಕೆಲವೇ ಕಿಮೀ ದೂರದಲ್ಲಿ ಈ ಯಾತ್ರಿಕರ ತಂಡ ಇತ್ತು. ಸದ್ಯಕ್ಕೆ ಯಾವುದೇ ತೊಂದರೆ ಆಗಿಲ್ಲ.

ಇನ್ನು ಯಾತ್ರಿಗಳ ಜೊತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನಿರಂತರ ಸಂಪರ್ಕದಲ್ಲಿದ್ದು, ತಂಡದ ನೆರವಿಗೆ ಸ್ಪಂದಿಸುತ್ತಿದ್ದಅರೆ. ಇನ್ನೂ 28 ಕಿ.ಮೀ‌.ಸಂಚರಿಸಿದರೆ ಯಾತ್ರಾ ಸ್ಥಳಕ್ಕೆ ಈ ತಂಡ ತಲುಪಲಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಸೈನಿಕರಿ ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಯಾತ್ರಿಗಳು ಹೇಳಿಕೊಂಡಿದ್ದಾರೆ.

ನಾಳೆ ಬೆಳಿಗ್ಗೆ ಅಮರನಾಥದಲ್ಲಿ‌ ದರ್ಶನ ಭಾಗ್ಯ ಸಿಗುವ ನಿರೀಕ್ಷೆ ಇದ್ದು, ಈ ಬಳಿಕ ನಾವು ಸುರಕ್ಷಿತವಾಗಿ ವಾಪಸ್ಸಾಗಲಿದ್ದೇವೆ ಎಂದು ಈ ತಂಡ ವಿಡಿಯೋ ಮೂಲಕ ಸಂದೇಶ ನೀಡಿದೆ. (ದಿಗ್ವಿಜಯ ನ್ಯೂಸ್​)