ಆರ್.ಕೃಷ್ಣ ಮೈಸೂರು
ಮೆಟ್ರೋಪಾಲಿಟಿನ್ ನಗರಗಳಲ್ಲಿ ಇರುವ ಪ್ಲಾಸ್ಟಿಕ್ ಬಾಟಲ್ ಮರುಬಳಕೆ ಮಾಡುವ ಹಾಗೂ ಬಟ್ಟೆ ಬ್ಯಾಗ್ ಪಡೆಯುವ ಯಂತ್ರ ಶೀಘ್ರವೇ ನಗರದಲ್ಲಿಯೇ ಸ್ಥಾಪನೆಗೊಳ್ಳಲಿವೆ.
ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರೆ ಅಲ್ಲಿ ಬಿಸಾಡುವುದರಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮ ತಡೆಗಟ್ಟಲು ಮೈಸೂರು ನಗರಪಾಲಿಕೆ ಮುಂದಾಗಿದೆ. ಇದರೊಂದಿಗೆ ಪ್ಲಾಸ್ಟಿಕ್ ಕವರ್ ಹಾವಳಿಯನ್ನು ತಡೆಗಟ್ಟಲು ಸುಲಭವಾಗಿ ಜನರಿಗೆ ಬಟ್ಟೆ ಬ್ಯಾಗ್ ಸಿಗುವಂತೆ ಮಾಡಲು ಯಂತ್ರಗಳನ್ನು ಅಳವಡಿಸಲು ಮುಂದಾಗಿದೆ.
ಇದಕ್ಕಾಗಿ ಈಗ ನಗರದ ಆಯ್ದ ಸ್ಥಳಗಳಲ್ಲಿ ಪ್ಲಾಸ್ಟಿಕ್ ಮರು ಬಳಕೆ ಯಂತ್ರ ಹಾಗೂ ಬಟ್ಟೆ ಬ್ಯಾಗ್ ಪಡೆಯಲು ಅನುಕೂಲವಾಗುವ ಯಂತ್ರಗಳನ್ನು ಅಳವಡಿಸಲು ಮೈಸೂರು ನಗರಪಾಲಿಕೆ ಮುಂದಾಗಿದೆ. ನಗರಪಾಲಿಕೆ ಆವರಣದಲ್ಲಿ ಇದಕ್ಕಾಗಿ ಈಗ ಪ್ರಾಯೋಗಿಕವಾಗಿ ಯಂತ್ರವನ್ನು ಅಳವಡಿಸಲಾಗಿದೆ.
ಪಿಇಟಿ ಬಾಟಲ್, ಪಿಇಟಿ ಬೇಲ್ಡ್ ಬ್ರಿಕ್, ವೇಸ್ಟ್ ಪಿಇಟಿ ಕೋಲಾ ಬಾಟಲ್, ಸೋಡಾ ಬಾಟಲ್, ಕುಡಿಯುವ ನೀರಿನ ಬಾಟಲ್, ಹಣ್ಣಿನ ರಸ ಬಾಟಲ್, ಟೀ ಪಾನೀಯ ಬಾಟಲ್ ಸೇರಿದಂತೆ ಇತರೆ ಮಿನರಲ್ ವಾಟರ್ ಬಾಟಲ್ಗಳನ್ನು ಮರು ಬಳಕೆ ಮಾಡಲು ಮತ್ತು ಮರು ಸಂಸ್ಕರಿಸಲು ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ.
ಪೆಟ್ ಬಾಟಲಿ ಯಂತ್ರದ ಕಾರ್ಯ:
ಪೆಟ್ ಬಾಟಲ್ ಮರುಬಳಕೆ ಯಂತ್ರದ ಮುಖ್ಯ ಕಾರ್ಯವು ಸಾಮಾನ್ಯವಾಗಿ ನಾಲ್ಕು ಹಂತಗಳನ್ನು ಒಳಗೊಂಡಿರುತ್ತದೆ. ಮೊದಲು ಪದರಗಳನ್ನು ನುಜ್ಜುಗುಜ್ಜುಗೊಳಿಸಿ, ಸ್ವಚ್ಛಗೊಳಿಸುತ್ತದೆ. ಲೇಬಲ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ, ಪಿಇಟಿ ಪದರಗಳನ್ನು ಒಣಗಿಸುತ್ತದೆ, ಬಾಟಲಿಗಳ ಮುಚ್ಚಳಗಳನ್ನು ತೆಗೆದು, ಅಂತಿಮವಾಗಿ ಪದರಗಳನ್ನು ಸಂಗ್ರಹಿಸುತ್ತದೆ. ಹೀಗೆ ಒಂದು ಸಾವಿರದಿಂದ ಎರಡು ಸಾವಿರ ಬಾಟಲಿಗಳನ್ನು ಪೆಟ್ ಬಾಟಲಿಗಳನ್ನು ಮರು ಬಳಕೆಗೆ ಸಂಗ್ರಹಿಬಾಟಲಿ ನೀಡಿ ಹಣ ಪಡೆಯಿರಿ:
ನಗರಪಾಲಿಕೆ ನಿರ್ಮಿಸಿರುವ ಪೆಟ್ ಬಾಟಲಿ ಮರು ಬಳಕೆ ಯಂತ್ರಕ್ಕೆ ಎರಡು ಪೆಟ್ ಬಾಟಲಿಗಳನ್ನು ಹಾಕಿದರೆ ಒಂದು ರೂ. ಪ್ರೋತ್ಸಾಹ ಧನ ದೊರೆಯುತ್ತದೆ. ಬಾಟಲಿಗಳನ್ನು ಎಲ್ಲೆಂದರೆ ಅಲ್ಲಿ ಬಿಸಾಡದೆ ಯಂತ್ರಗಳಲ್ಲಿಯೇ ಹಾಕುವಂತೆ ಜನರನ್ನು ಪ್ರೋತ್ಸಾಹಿಸಲು ಇಂತಹ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ನಗರದಲ್ಲಿ ನಿರ್ಮಿಸಲಿರುವ ಯಂತ್ರಗಳಲ್ಲಿ ಯಾವುದೇ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಕಿದರೆ ಅದನ್ನು ಯಂತ್ರ ಸೆನ್ಸಾರ್ ಮಾಡುತ್ತದೆ. ಆ ಬಳಿಕ 25 ಸೆಕೆಂಡ್‌ಗಳಲ್ಲಿ ಸೆನ್ಸಾರ್‌ಗೆ ಕೈ ತೋರಿಸಿದರೆ ಒಂದು ರೂ. ನಾಣ್ಯ, ಎಟಿಎಂ ಯಂತ್ರದಲ್ಲಿ ಹಣ ಹೊರ ಬರುವಂತೆ ಹೊರ ಬರುತ್ತದೆ. ಇದರಿಂದ ಜನರಿಗೆ ಅಲ್ಪ ಮೊತ್ತದ ಹಣ ದೊರೆಯುವುದು ಒಂದೆಡೆಯಾದರೆ ನಗರದಲ್ಲಿ ಪ್ಲಾಸ್ಟಿಕ್ ಸಮಸ್ಯೆಯನ್ನು ಪರಿಹರಿಸಲು ಸಹಕಾರಿಯಾಗುತ್ತದೆ.
ಖರೀದಿ ಮಾಡಲು ಜನಸ್ನೇಹಿ ಸೌಲಭ್ಯ
ಪ್ಲಾಸ್ಟಿಕ್ ಬಾಟಲ್‌ಗಳನ್ನು ಮರು ಬಳಕೆ ಮಾಡುವ ಯಂತ್ರದಂತೆಯೇ ಪ್ಲಾಸ್ಟಿಕ್ ಕವರ್‌ಗಳ ಹಾವಳಿ ತಡೆಯಲು ಬಟ್ಟೆ ಬ್ಯಾಗ್ ನೀಡುವ ಯಂತ್ರವನ್ನು ಜೊತೆ ಜೊತೆಗೆ ಅಳವಡಿಸಲಾಗುತ್ತಿದೆ. ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ನಗರಪಾಲಿಕೆ ಕಾರ್ಯಾಚರಣೆ ಮಾಡುತ್ತಿರುವ ಬೆನ್ನಲ್ಲೆ ಬಟ್ಟೆ ಬ್ಯಾಗ್ ನೀಡುವ ಯಂತ್ರ ಜನರಿಗೆ ಸಹಕಾರಿ ಅಗಲಿದೆ.
ಪ್ರವಾಸಿ ತಾಣ, ದೇವಾಲಯ, ಮಾರುಕಟ್ಟೆ, ಜನ ನಿಬಿಡ ಪ್ರದೇಶಗಳಲ್ಲಿ ಈ ಯಂತ್ರವನ್ನು ಅಳವಡಿಸಲಾಗುತ್ತದೆ. ಇಂದಿನ ಆಧುನಿಕತೆಗೆ ತಕ್ಕಂತೆ ಯುಪಿಐ, ಗೂಗಲ್, ಫೋನ್ ಪೇ ಮೂಲಕ 10 ರೂ. ಸ್ಕಾೃನ್ ಮಾಡಿದರೆ ಬಟ್ಟೆ ಬ್ಯಾಗ್ ಯಂತ್ರದಿಂದ ಹೊರ ಬರುತ್ತದೆ. ಯುಪಿಐ, ಗೂಗಲ್, ಫೋನ್ ಪೇ ಇಲ್ಲದವರು 10 ರೂ.ನ ಒಂದು ಕಾಯಿನ್ ಅಥವಾ 5 ರೂ.ನ ಎರಡು ಕಾಯಿನ್‌ಗಳನ್ನು ಹಾಕಿದರೂ ಬ್ಯಾಗ್ ಸಿಗಲಿದೆ. ಖರೀದಿ ಮಾಡಲು ಜನಸ್ನೇಹಿ ಸೌಲಭ್ಯ ಬಳಕೆ ಮಾಡಿಕೊಳ್ಳುತ್ತಿರುವುದೂ ಆಶಾದಾಯಕವಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಕನಿಷ್ಠಗೊಳಿಸಲು ಇದು ಸಹಕಾರಿ ಆಗಲಿದೆ.
ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕು
ಸಾಂಸ್ಕೃತಿಕ ನಗರಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕು ಎನ್ನುವ ಉದ್ದೇಶದಿಂದ ಪೆಟ್ ಬಾಟಲಿ ಮರು ಬಳಕೆ ಹಾಗೂ ಪ್ಲಾಸ್ಟಿಕ್ ಕವರ್‌ಗಳನ್ನು ತಡೆಯಲು ಬಟ್ಟೆ ಬ್ಯಾಗ್ ಪಡೆಯುವ ಯಂತ್ರಗಳನ್ನು ನಗರದ ಆಯ್ದ ಪಡೆ ಅಳವಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಪಾಲಿಕೆ ಮುಂಭಾಗ ಪ್ರಾಯೋಗಿಕವಾಗಿ ಯಂತ್ರವನ್ನು ಅಳವಡಿಸಲಾಗಿದೆ. ಮುಂದೆ ಟೆಂಡರ್ ಮೂಲಕ ವಿವಿಧೆಡೆ ಯಂತ್ರ ಅಳವಡಿಸಲು ಚಿಂತನೆ ನಡೆಸಲಾಗಿದ್ದು, ರೂಪರೇಷ ತಯಾರಿಸಲಾಗುತ್ತಿದೆ.
ಆಶಾದ್ ಉರ್ ರೆಹಮಾನ್ ಷರೀಫ್
ಆಯುಕ್ತ , ಮೈಸೂರು ನಗರಪಾಲಿಕೆ