ಜಿಲ್ಲೆ

ಸಾಮಾಜಿಕ ಸೇವೆಯಿಂದ ವ್ಯಕ್ತಿತ್ವದ ವಿಕಸನ...

ಡಾ.ಗಣನಾಥ್​ ಶೆಟ್ಟಿ ಎಕ್ಕಾರು ಅಭಿಪ್ರಾಯ

ಎನ್​ಎಸ್​ಎಸ್​ ಶಿಬಿರದ ಸಮಾರೋಪ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಮುದಾಯದ ಭಾಗವಹಿಸುವಿಕೆ ಉತ್ತಮವಾಗಿರುವ ಯಾವುದೇ ಊರಿನಲ್ಲಿ ಕಾರ್ಯಕ್ರಮ ನಡೆದರೂ ಅದು ಅತ್ಯಂತ ಪರಿಣಾಮ ಹೊಂದಿರುತ್ತದೆ. ಸಾಮಾಜಿಕ ಸೇವೆಯಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳವುದರಿಂದ ಸಂಘ ಜೀವನ, ಸಹಬಾಳ್ವೆ ಮತ್ತು ವ್ಯಕ್ತಿತ್ವದ ವಿಕಸನವಾಗಲು ಸಹಕಾರಿಯಾಗುತ್ತದೆ ಎಂದು ರಾಜ್ಯ ಎನ್​ಎಸ್​ಎಸ್​ನ ನಿಕಟಪೂರ್ವ ಸಂಪರ್ಕಾಧಿಕಾರಿ ಡಾ.ಗಣನಾಥ್​ ಶೆಟ್ಟಿ ಎಕ್ಕಾರು ಅಭಿಪ್ರಾಯಪಟ್ಟರು.

ಉಡುಪಿಯ ಕಡೆಕಾರುವಿನಲ್ಲಿರುವ ಬಿಲ್ಲವ ಸೇವಾ ಸಂಘ ಮತ್ತು ನಾರಾಯಣಗುರು ಸಮುದಾಯ ಭವನದಲ್ಲಿ ಅಜ್ಜರಕಾಡಿನ ಡಾ. ಜಿ.ಶಂಕರ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಏನ್​ಎಸ್​ಎಸ್​ ವತಿಯಿಂದ ಮಾ.2ರಂದು ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕರ್ತವ್ಯವೆಂದರೆ ಜವಾಬ್ದಾರಿ

ಕಡೆಕಾರಿನ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಸಂದೀಪ್​ ಮಾತನಾಡಿ, ನಾವೆಲ್ಲರೂ ನಮ್ಮ ಮೂಲಭೂತ ಹಕ್ಕುಗಳಿಗೆ ಪ್ರಾಮುಖ್ಯತೆ ನೀಡುವಷ್ಟು ನಮ್ಮ ಮೂಲಭೂತ ಕರ್ತವ್ಯಗಳಿಗೆ ನೀಡುತ್ತಿಲ್ಲ. ನಮ್ಮ ಕರ್ತವ್ಯವನ್ನು ಜವಾಬ್ದಾರಿ ಎಂದು ಭಾವಿಸಿ ಸಾಮಾಜಿಕ ಸೇವೆಗೆ ಆದ್ಯತೆ ನೀಡಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರ್​ ಪ್ರಸಾದ್​ ಕೆ. ಅಧ್ಯಕ್ಷತೆ ವಹಿಸಿದ್ದರು. ಸಾಫಲ್ಯ ಟ್ರಸ್ಟ್​ನ ನಿರ್ದೇಶಕಿ ನಿರುಪಮಾ ಪ್ರಸಾದ್​, ಯುವಕ ಮಂಡಲ ಕಡೆಕಾರ್​ನ ಅಧ್ಯಕ್ಷ ದೀಪಕ್​ ಪುತ್ರನ್​, ಗ್ರಾಪಂ ಮಾಜಿ ಸದಸ್ಯ ತಾರಾನಾಥ ಆರ್​. ಸುವರ್ಣ, ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ರಮ್ಯಾ ವಿ. ಉಪಸ್ಥಿತರಿದ್ದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ವಿದ್ಯಾ ಡಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ತೃತೀಯ ಬಿಎ ವಿದ್ಯಾರ್ಥಿನಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ರಾ.ಸೇ. ಯೋಜನಾಧಿಕಾರಿ ಪ್ರೊ.ನಿಕೇತನಾ ವಂದಿಸಿದರು.