ಜಿಲ್ಲೆ

ಲಿಂಕ್​ ಒತ್ತಿದ್ದರಿಂದ 2 ಲಕ್ಷ ರೂ. ವಂಚನೆ

Haveri - Kariyappa Aralikatti

ಹಾವೇರಿ: ಪೋನ್​ಪೇ ಮಿಸ್​ಮ್ಯಾಚ್​ ಟ್ರಾಜಾಕ್ಷನ್​ ಬಗ್ಗೆ ಆನ್​ಲೈನ್​ನಲ್ಲಿ ಕಂಪ್ಲೆಂಟ್​ ಮಾಡಿದ್ದ ಸರ್ಕಾರಿ ನೌಕರರೊಬ್ಬರಿಗೆ ಯಾರೋ ವ್ಯಕ್ತಿ ಲಿಂಕ್​ವೊಂದನ್ನು ಕಳುಹಿಸಿ 2 ಲಕ್ಷ ರೂ. ಹಣ ಬೇರೆ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ ಕುರಿತು ಇಲ್ಲಿಯ ಸೈಬರ್​ ಕೆಂ ಪೊಲೀಸ್​ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಇಲ್ಲಿಯ ಬಸವೇಶ್ವರ ನಗರದ ನಿವಾಸಿ ಹಾಗೂ ಆರೋಗ್ಯ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಉಮಾಪತಿ ಜಿ. ಎಂಬುವರಿಗೆ ಮೋಸ ಮಾಡಿರುವುದು.

ಇವರು ಪೋನ್​ ಪೇ ಮಿಸ್​ಮ್ಯಾಚ್​ ಟ್ರಾಜಾಕ್ಷನ್​ ಬಗ್ಗೆ ಆನ್​ಲೈನ್​ನಲ್ಲಿ ದೂರು ನೀಡಿದ್ದರು. ಇವರ ವಾಟ್ಸ್​ಅಪ್​ ನಂಬರ್​ಗೆ ಯಾರೋ ಅಪರಿಚಿತ ವ್ಯಕ್ತಿ ಲಿಂಕ್​ವೊಂದನ್ನು ಕಳುಹಿಸಿದ್ದಾನೆ. ಅದನ್ನು ಉಮಾಪತಿಯವರು ಒತ್ತಿದಾಗ ಅವರ ಖಾತೆಯಲ್ಲಿದ್ದ 2 ಲಕ್ಷ ರೂ. ಬೇರೆ ಖಾತೆಗೆ ವರ್ಗಾವಣೆ ಆಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.