ರಾಮನಗರ ಸಮೀಪದ ಜಲಕೊಲ್ಲಿಯಲ್ಲಿ ರಸ್ತೆಗೆ ಉರುಳಿರುವ ಮರ.  
ಜಿಲ್ಲೆ

ರಸ್ತೆ ಮೇಲೆ ಬಿದ್ದಿದ್ದ ಮರ ತೆರವು

ಅಭಿನಯ್ ಎಚ್.ಎಂ

ವಿರಾಜಪೇಟೆ: ರಾಮನಗರ ಸಮೀಪದ ಜಲಕೊಲ್ಲಿಯಲ್ಲಿ ವಿಪರೀತ ಗಾಳಿ ಹಾಗೂ ಮಳೆ ಪರಿಣಾಮ ಬೃಹತ್ ಗಾತ್ರದ ಮರವೊಂದು ಕಾಫಿ ತೋಟದಿಂದ ರಸ್ತೆಯ ಮೇಲೆ ಬಿದ್ದಿದೆ.

ಮರವು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಕಂಬ ನೆಲಕ್ಕೆ ಉರುಳಿದೆ. ಈ ಸಂದರ್ಭದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸ್ಥಳೀಯರು ಮಾಹಿತಿ ನೀಡಿದ್ದರಿಂದ ವಿರಾಜಪೇಟೆಯ ಸೆಸ್ಕ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ವಿದ್ಯುತ್ ತಂತಿಯನ್ನು ಸರಿಪಡಿಸಿದರು.