ಕಡೂರು: ಪಟ್ಟಣದ 2ನೇ ವಾರ್ಡ್ ವ್ಯಾಪ್ತಿಯ ಹಿಂದು ಸ್ಮಶಾನದ ಒತ್ತುವರಿ ಜಾಗವನ್ನು ಪುರಸಭೆ ಪ್ರಯತ್ನದಿಂದ ತೆರವುಗೊಳಿಸಿ 25ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿ ಗೊಳಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಕರಿಬಡ್ಡೆ ರಾಜು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 2 ದಶಕಗಳಿಂದ ಈ ಸ್ಮಶಾನವನ್ನು ಸ್ಥಳೀಯರು, ತೋಟದ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದರು. ಪುರಸಭೆ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಪ್ರಯತ್ನದಿಂದ ಒತ್ತುವರಿದಾರರನ್ನು ಮನವೊಲಿಸಿ ತೆರವುಗೊಳಿಸುವ ಕಾರ್ಯದ ಜತೆಗೆ ಸಂಪೂರ್ಣ ತಂತಿಬೇಲಿ ನಿರ್ಮಿಸಿ ಪುರಸಭೆ ಆಸ್ತಿಯನ್ನು ಉಳಿಸುವ ಕೆಲಸ ಮಾಡಿದ್ದರೆ ಎಂದರು.
ಸ್ಮಶಾನದ ಅಭಿವೃದ್ಧಿಗೆ ಒತ್ತುಕೊಡುವ ಮೂಲಕ ಪ್ರಾರಂಭಿಕವಾಗಿ ನಗರೋತ್ಥಾನ ಯೋಜನೆಯಿಂಧ 15 ಲಕ್ಷದಲ್ಲಿ ಕಾಂಪೌಂಡ್ ನಿರ್ಮಾಣ, ಪುರಸಭೆ ಅನುದಾನದಡಿ 10 ಲಕ್ಷ ವೆಚ್ಚದಲ್ಲಿ ಸಮುದಾಯ ಭವನದ ನಿರ್ಮಾಣದ ಕಾರ್ಯ ಪೂರ್ಣಗೊಂಡಿದೆ. 15ನೇ ಹಣಕಾಸು ಅನುದಾನದಡಿ ಜಾಗದ ಸುತ್ತಲು ತಂತಿಬೇಲಿ ಅಳವಡಿಸಲಾಗಿದೆ ಎಂದರು.
ಈ ಜಾಗದಲ್ಲಿ ಹಾದು ಹೋಗಿರುವ ಕೊಳಚೆ ನೀರಿನ ಚರಂಡಿ ದುರಸ್ತಿ ಮಾಡಿಸಿ ಬೇರೆಡೆಗೆ ಹರಿಯುವಂತೆ ಮಾಡಿದರೆ ನಾಗರಿಕರ ವಾಯು ವಿಹಾರಕ್ಕೆ ಸಹಕಾರಿಯಾಗಲಿದೆ. ಇದಕ್ಕೆ ಪುರಸಭೆ ಆಡಳಿತ ಹೆಚ್ಚಿನ ಅನುದಾನ ನೀಡಿದರೆ ಇದೊಂದು ಉತ್ತಮ ಉದ್ಯಾನವನವಾಗಿ ಮಾಡಲು ಸಾಧ್ಯ ಇದೆ. ಶಾಸಕ ಕೆ.ಎಸ್.ಆನಂದ್ ಮತ್ತು ಸಂಸದರು ಜಾಗದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದರು.
ಅಂತರಾಷ್ಟ್ರೀಯ ದೇಹಪಟು ಜಿಮ್ ಚೇತನ್, ಮಲ್ಲಿಕಾರ್ಜುನ್, ಗುರು, ಪೂಜಾರ ಶಿವಣ್ಣ, ಹೊನ್ನಪ್ಪ ಮತ್ತಿತರಿದ್ದರು.