ಕನಕಗಿರಿ: ಪಟ್ಟಣದಲ್ಲಿ ಶನಿವಾರ ಬೆಳಗ್ಗೆ ಜೆಸಿಬಿಗಳು ಕಾರ್ಯಾಚರಣೆಗೆ ಇಳಿದವು. ವಾಲ್ಮೀಕಿ ವೃತ್ತದಿಂದ ಬಸ್ ನಿಲ್ದಾಣ ರಸ್ತೆ, ತಾವರಗೇರಾ ರಸ್ತೆ, ಗಂಗಾವತಿ ರಸ್ತೆ, ನವಲಿ ರಸ್ತೆಯಲ್ಲಿ ಒತ್ತುವರಿ ಮಾಡಿ ರಸ್ತೆ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದ್ದ ಗೂಡಂಗಡಿಗಳನ್ನು ಪಪಂನಿಂದ ತೆರವುಗೊಳಿಸಲಾಯಿತು.
ಈ ವೇಳೆ ಪೊಲೀಸ್ ಬಂದೋಬಸ್ತ್‌ನೊಂದಿಗೆ 3 ಜೆಸಿಬಿ ಹಾಗೂ ಸಿಬ್ಬಂದಿಯೊಂದಿಗೆ ಆಗಮಿಸಿದ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ತೆರವು ಕಾರ್ಯಾಚರಣೆಗೆ ಮುಂದಾದರು. ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪಪಂ ಮೊದಲ ಸಾಮಾನ್ಯ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಎರಡು ಬಾರಿ ಒತ್ತುವರಿ ಮಾಡಿಕೊಂಡ ಗೂಡಂಗಡಿಗಳ ಮಾಲೀಕರಿಗೆ ತೆರವುಗೊಳಿಸಲು ಸೂಚಿಸಲಾಗತ್ತು. ಸೂಚನೆ ಬಳಿಕವೂ ತೆರವುಗೊಳಿಸಿದ 30 ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.