ಇಳಕಲ್ಲದ ಕಂಠಿ ವೃತ್ತದಲ್ಲಿ ಹಿಂದಿನ ರಸ್ತೆಯಲ್ಲಿ ನಿಂತ ನೀರು. 
ಜಿಲ್ಲೆ

ರಸ್ತೆಯಲ್ಲಿನ ನೀರು ತೆರವುಗೊಳಿಸಿ

ಇಳಕಲ್ಲ (ಗ್ರಾ): ನಗರದ ಕಂಠಿ ವೃತ್ತದ ಹಿಂದಿನ ರಸ್ತೆಯಲ್ಲಿ ತುಂಬಿಕೊಂಡಿರುವ ನೀರನ್ನು ಕೂಡಲೇ ನಗರಸಭೆ ಅಧಿಕಾರಿಗಳು ತೆರವುಗೊಳಿಸಬೇಕೆಂದು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.

ಸ್ವಲ್ಪ ಮಳೆಯಾದರೂ ಈ ರಸ್ತೆಯಲ್ಲಿ ನೀರು ಮುಂದೆ ಸಾಗದೆ ಅಲ್ಲೇ ತುಂಬಿಕೊಳ್ಳುತ್ತಿದೆ.

ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಯೋವೃದ್ಧರು ನೀರಿನಲ್ಲೇ ಸಂಚರಿಸುವ ಸ್ಥಿತಿ ನಿರ್ಮಾಣಗೊಂಡಿದೆ.

ಬೈಕ್ ಹಾಗೂ ವಾಹನಗಳು ನೀರಲ್ಲಿ ಹಾಯ್ದು ಹೋದರೆ ಬೀದಿ ಬದಿ ವ್ಯಾಪಸ್ಥರಿಗೆ ಹಾಗೂ ಪಾದಚಾರಿಗಳಿಗೆ ನೀರು ಸಿಡಿಯುತ್ತದೆ ಎಂದು ದೂರಿದರು.

ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ನೀರು ಸರಾಗವಾಗಿ ಮುಂದೆ ಸಾಗುವಂತೆ ಮಾಡಬೇಕೆಂದು ಮನವಿ ಮಾಡಿದ್ದಾರೆ.