ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಿವೇಕಾನಂದ ಯುವಕ ಸಂಘದ ಪದಾಧಿಕಾರಿಗಳು ಉಪ್ಪಳ್ಳಿ ಗ್ರಾಮದಲ್ಲಿ (ಶಾಂತಿನಗರ, ಕಲ್ಡೊಡ್ಡಿ) ಹರಿಜನ ಸಮುದಾಯಕ್ಕೆ ಸೇರಿದ ಗ್ರಾಮಠಾಣಾ ಜಾಗವನ್ನು ಕಬಳಿಕೆ ಮಾಡಿ ಅತಿಕ್ರಮಣ ಮಾಡಿರುವುದನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು. ಸಂಘದ ಅಧ್ಯಕ್ಷ ರಾಜು.ಆರ್, ಪ್ರಧಾನ ಕಾರ್ಯದರ್ಶಿ ಚೇತನ್ ಕುಮಾರ್, ಪ್ರಮುಖರಾದ ಮಲ್ಲೇಶ, ಪ್ರಕಾಶ್ ಮತ್ತಿತರಿದ್ದರು. 
ಜಿಲ್ಲೆ

ಹರಿಜನ ಸಮುದಾಯಕ್ಕೆ ಸೇರಿದ ಭೂಕಬಳಿಕೆ ತೆರವುಗೊಳಿಸಿ

ಚಿಕ್ಕಮಗಳೂರು: ನಗರದ ಹೊರವಲಯದ ಕಸಬಾ ಹೋಬಳಿ ಉಪ್ಪಳ್ಳಿ ಗ್ರಾಮದಲ್ಲಿ (ಶಾಂತಿನಗರ, ಕಲ್ಡೊಡ್ಡಿ) ಹರಿಜನ ಸಮುದಾಯಕ್ಕೆ ಸೇರಿದ ಗ್ರಾಮಠಾಣಾ ಜಾಗವನ್ನು ಕಬಳಿಕೆ ಮಾಡಿ ಅತಿಕ್ರಮಣ ಮಾಡಿರುವುದನ್ನು ತೆರವುಗೊಳಿಸುವಂತೆ ಆಗ್ರಹಿಸಿ ವಿವೇಕಾನಂದ ಯುವಕ ಸಂಘದ ಪದಾಧಿಕಾರಿಗಳು ಬುಧವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೂ ಮುನ್ನ ನಗರದ ತಾಲೂಕು ಕಚೇರಿ ಆವರಣದಿಂದ ಆಜಾದ್ ಪಾರ್ಕ್ ವೃತ್ತದವರೆಗೂ ಪ್ರತಿಭಟನ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ಹರಿಜನರ ಭೂಮಿ ಕಬಳಿಕೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಶಾಂತಿ ನಗರ, ಕಲ್ದೊಡ್ಡಿ ಗ್ರಾಮದ ಸರ್ವೆ ನಂಬರ್ ೩೧೯ ರಲ್ಲಿ ಹರಿಜನರು ವಾಸಿಸುತ್ತಿದ್ದು, ೧೯೫೩-೫೪ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ಸಮುದಾಯಕ್ಕೆ ಸೇರಿದ ಭೂಮಿಯನ್ನು ಕಬಳಿಕೆ ಮಾಡಲಾಗಿದೆ. ಇದಲ್ಲದೆ ಇದೀಗ ಖಾಸಗಿ ಲೇಔಟ್ ನಿರ್ಮಾಣ ಮಾಡಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.
೩.೨೫ ಎಕರೆ ಜಾಗವಿರುವ ಈ ಮಂಜೂರಾತಿಯನ್ನು ರದ್ದುಮಾಡಿ ದಲಿತರ ಪುನರ್ ವಸತಿ ನಿವೇಶನಕ್ಕಾಗಿ ಅನುವು ಮಾಡಬೇಕು. ಹಿಂದಿನ ನಮ್ಮ ಪೂರ್ವಜರು ಇದ್ದ ಈ ಗ್ರಾಮ ಪ್ಲೇಗ್‌ನಂತಹ ಮಹಾಮಾರಿ ರೋಗಕ್ಕೆ ತುತ್ತಾಗಿ ಗ್ರಾಮವನ್ನು ತೊರೆದಿದ್ದು ಇಂದು ನಾವು ಮನೆಗಳಿಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿz್ದೆÃವೆ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ನಿವೇಶನ ರಹಿತರಾದ ನಮಗೆ ಕೂಡಲೇ ಈ ಜಾಗವನ್ನು ಖಾಸಗಿ ವ್ಯಕ್ತಿಗಳಿಂದ ತೆರವುಗೊಳಿಸಿ ನಿವೇಶನ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ರಾಜು.ಆರ್, ಪ್ರಧಾನ ಕಾರ್ಯದರ್ಶಿ ಚೇತನ್ ಕುಮಾರ್, ಪ್ರಮುಖರಾದ ಮಲ್ಲೇಶ, ಪ್ರಕಾಶ್ ಮತ್ತಿತರಿದ್ದರು.