ಯಲ್ಲಾಪುರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಂಜುನಾಥ ನಗರದ ಕೆರೆಗುಂಡಿ ಜಮೀನಿನಲ್ಲಿ ಚರ್ಮ ಹದ ಮಾಡಲಾಗುತ್ತಿತ್ತು. ಶತಮಾನಗಳಿಂದ ಬಳಸಿಕೊಂಡು ಬಂದ ಸ್ಥಳ ಈಗ ಅತಿಕ್ರಮಣವಾಗಿದ್ದು, ಅದನ್ನು ಖುಲ್ಲಾಪಡಿಸಬೇಕೆಂದು ಅಂಬೇಡ್ಕರ್ ಸೇವಾ ಸಂಘ ಆಗ್ರಹಿಸಿದೆ.
ಈ ಕುರಿತು ಸಂಘದ ಪ್ರಮುಖರು ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಗುರುವಾರ ಮನವಿ ಸಲ್ಲಿಸಿ, ಕೆರೆಗುಂಡಿ ಪ್ರದೇಶ ಸಮಾಜದ ಭಾವನಾತ್ಮಕ ಸಂಬಂಧ ಹೊಂದಿದ್ದು, ಪೂರ್ವಜರು ಚರ್ಮ ಹದಗೊಳಿಸಲು ಈ ಪ್ರದೇಶವನ್ನು ಬಳಸುತ್ತಿದ್ದರು. ಅಲ್ಲಿ ಚರ್ಮ ಹದ ಮಾಡುವ ಕುಣಿ, ಚರ್ಮ ಒಣಗಿಸುವ ಸಮತಟ್ಟಾದ ಪ್ರದೇಶ ಇತ್ತು. ಆದರೆ, ಈ ಪ್ರದೇಶ ಅತಿಕ್ರಮಣ ಆಗಿದ್ದಲ್ಲದೇ ಸಿಮೆಂಟ್ ಪ್ಲೇಟ್ ಅಳವಡಿಸಿ ಕಾಂಪೌಂಡ್ ಗೋಡೆ ನಿರ್ವಿುಸಲಾಗಿದೆ. ಕೆರೆಗುಂಡಿ ಪ್ರದೇಶದ ಅತಿಕ್ರಮಣ ತೆರವುಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂಘದ ಅಧ್ಯಕ್ಷ ಲೋಕೇಶ ಪಾಟಣಕರ, ಉಪಾಧ್ಯಕ್ಷ ಅನಿಲ ಮರಾಠೆ, ಕಾರ್ಯದರ್ಶಿ ಸಂತೋಷ ಪಾಟಣಕರ, ಸಹ ಕಾರ್ಯದರ್ಶಿ ಈಶ್ವರ ಪಾಟಣಕರ, ಸದಸ್ಯರಾದ ಸುರೇಶ ಬೋರಕರ, ಪೂಜಾ ನೇತ್ರೇಕರ, ಏಕನಾಥ ಮುರ್ಡೆಶ್ವರ, ಅನಿತಾ ಪಾವಸ್ಕರ, ಭಾಗ್ಯಲಕ್ಷ್ಮೀ ಪಾಟಣಕರ, ರಾಜು ಪಾಲೇಕರ, ನಾಗರಾಜ ನೇತ್ರೇಕರ, ವಿನಾಯಕ ಬೋರಕರ, ಚಾಂದರಾಜ್ ಪಾಟಣಕರ, ಪಪಂ ಸದಸ್ಯೆ ಶ್ಯಾಮಲಿ ಪಾಟಣಕರ ಇದ್ದರು.