ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಮಾರ್ಟಳ್ಳಿಯ ರಾಜಾ ಕಾಳಿಕಾಂಭ ದೇಗುಲದ ಮುಂಭಾಗದ ಗೋಪುರವನ್ನು ತೆರವುಗೊಳಿಸಲಾಯಿತು. 
ಜಿಲ್ಲೆ

ದೇಗುಲದ ಗೋಪುರ ಮುಂಭಾಗ ತೆರವು

ಎಂ.ರವಿ

ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಶನಿವಾರ ರಾಜಾ ಕಾಳಿಕಾಂಭ ದೇಗುಲದ ಗೋಪುರದ ಮುಂಭಾಗವನ್ನು ತೆರವುಗೊಳಿಸಲಾಯಿತು.

ಮಾರ್ಟಳ್ಳಿ ಗ್ರಾಮದಿಂದ ಹಳೇ ಮಾರ್ಟಳ್ಳಿಯ ತಾಂಡಮೇಡು ಗ್ರಾಮದವರೆಗೆ 4 ಕೋಟಿ ರೂ. ವೆಚ್ಚದಲ್ಲಿನ ರಸ್ತೆ ಅಭಿವೃದ್ಧಿ ನಿರ್ಮಾಣ ಕಾಮಗಾರಿಗೆ ಕಳೆದ 2 ವರ್ಷದ ಹಿಂದೆ ಚಾಲನೆ ನೀಡಲಾಗಿತ್ತು. ಆದರೆ ಕೆಲವು ಕಾರಣಾಂತರದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮವಹಿಸಿದ ಪಿಡಬ್ಲುೃಡಿ ಇಲಾಖೆಯ ಅಧಿಕಾರಿಗಳು ಕಾಮಗಾರಿಗೆ ಮುಂದಾಗಿದ್ದು, ದೇಗುಲದ ಗೋಪುರದ ಮುಂಭಾಗವನ್ನು ಜೆಸಿಬಿ ಮೂಲಕ ತೆರೆವುಗೊಳಿಸಿದರು. ಕಾಮಗಾರಿಯನ್ನು ಆರಂಭಿಸಲಾಗಿದೆ.