ಮಹಾಲಿಂಗಪುರ ಪಟ್ಟಣದ ಸೈದಾಪುರ-ಸಮೀರವಾಡಿ ರಸ್ತೆ ಹತ್ತಿರ ನಿರ್ಮಿಸುತ್ತಿರುವ ಚರ್ಚ್ ಕಟ್ಟಡ. 
ಜಿಲ್ಲೆ

ಚರ್ಚ್ ಅನಧಿಕೃತ ಕಟ್ಟಡ ತೆರವುಗೊಳಿಸಿ

ಗಿರೀಶ ಸಗರ

ಮಹಾಲಿಂಗಪುರ: ಪಟ್ಟಣದ ಸೈದಾಪುರ-ಸಮೀರವಾಡಿ ರಸ್ತೆ ಹತ್ತಿರ ಅಕ್ರಮವಾಗಿ ಚರ್ಚ್ ನಿರ್ಮಾಣವಾಗುತ್ತಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಹಿಂದುಪರ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಕಚೇರಿಗಳ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಜಮಖಂಡಿ ಎಸಿ, ರಬಕವಿ-ಬನಹಟ್ಟಿ ತಹಸೀಲ್ದಾರ್, ಮಹಾಲಿಂಗಪುರ ಠಾಣಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿರುವ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಮುಖಂಡರು, ಸಾರ್ವಜನಿಕರು ಕೂಡಲೇ ಚರ್ಚ್ ಕಟ್ಟಡ ತೆರವುಗೊಳಿಸುವಂತೆ ಆಗ್ರಹಿಸಿದರು.

ಮುಖಂಡರಾದ ಮಹಾಂತೇಶ ಘಟ್ನಟ್ಟಿ, ಶಿವಲಿಂಗ ಘಂಟಿ, ರವಿ ಜವಳಗಿ, ನಂದೂ ಲಾತೂರ, ಚನ್ನಪ್ಪ ಲಿಂಬಿಕಾಯಿ, ಶ್ರೀಶೈಲ ದೊಡಮನಿ, ವಸಂತ ದೊಡಮನಿ, ನಂದೇಶ ಲಿಂಬಿಕಾಯಿ, ಪ್ರವೀಣ ಮುದ್ದಾಪುರ, ಪ್ರಭು ನಾಗನೂರು, ತುಕಾರಾಮ ದೊಡಮನಿ, ಸದಾಶಿವ ಘಂಟಿ, ಮಾರುತಿ ಜಾಧವ, ಸದಾಶಿವ ಘಂಟಿ, ವಿಷ್ಣು ಹಟ್ಟಿ, ಶಿವಪ್ಪ ಹಟ್ಟಿ, ನಿಂಗಪ್ಪ ಜಾಧವ, ಬಸವರಾಜ ಜಾಧವ, ಮಹೇಶ ಜಾಧವ, ಚನ್ನು ಆರೆಗಾರ, ಲಲಿತಾ ಘಂಟಿ, ಯಲ್ಲಪ್ಪ ಘಂಟಿ, ಮಹಾನಂದಾ ಜಾಧವ ಇತರರಿದ್ದರು.