ತುರುಮಂದೆಪ್ಪ 
ಜಿಲ್ಲೆ

ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸಿ

ನರೇಶ್ ಕುಮಾರ್

ಮಸ್ಕಿ: ತಾಲೂಕಿನ ಮರಕಮ್‌ದಿನ್ನಿ ಗ್ರಾಮದ ಸರ್ವೇ ನಂ.108ರ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ವ್ಯಕ್ತಿಯೊಬ್ಬರು ಶೆಡ್ ನಿರ್ಮಿಸಿಕೊಂಡಿದ್ದು, ತೆರವುಗೊಳಿಸಬೇಕೆಂದು ದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಘಟನಾ ಸಂಚಾಲಕ ತುರುಮಂದೆಪ್ಪ ಒತ್ತಾಯಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1992-93ರಲ್ಲಿ ಪ್ರವಾಹ ಬಂದಾಗ ಅನೇಕರು ಮನೆ ಕಳೆದುಕೊಂಡು ನಿರಾಶ್ರಿತದವರಿಗೆ ಸವೇ ನಂ. 108ರ 4 ಎಕರೆ ಜಾಗದಲ್ಲಿ 98 ನಿವೇಶನ ಗುರುತಿಸಲಾಗಿದೆ. ಅವುಗಳಲ್ಲಿ 97 ಜನ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆದರೆ, ಒಂದು ಪ್ಲಾಟ್ ಸರ್ಕಾರ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಖಾಲಿ ಸೈಟ್ ಇಟ್ಟುಕೊಂಡಿದೆ. ಅದರಲ್ಲಿ ಕುಡಿವ ನೀರಿಗಾಗಿ ಬೋರ್‌ವೆಲ್ ಕೊರೆಸಲಾಗಿದೆ.

ಈಗ ಖಾಸಗಿ ವ್ಯಕ್ತಿಯೊಬ್ಬರೂ ಖಾಲಿ ಜಾಗ ಕಬಳಿಸಿ ಶಡ್ ನಿರ್ಮಿಸಿಕೊಂಡು ಬೋರ್‌ವೆಲ್ ಸಹ ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ವಸತಿ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಬೇಕು. ಅಕ್ರಮವಾಗಿ ನಿರ್ಮಿಸಿಕೊಂಡಿರುವ ಶೆಡ್ ತೆರವುಗೊಳಿಸಬೇಕು.

ಇಲ್ಲದಿದ್ದರೆ ಜು.22ರಂದು ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಮುಖಂಡರಾದ ರಡ್ಡೆಪ್ಪ ಕಣಿಕಲ್ಲೂರು, ಶಂಭುಲಿಂಗಪ್ಪ ಇರಕಲ್, ಸಿದ್ದಪ್ಪ ಡೋಣಮರಡಿ, ವಿಜಯಕುಮಾರ ಸಾಗರಕ್ಯಾಂಪ್ ಇದ್ದರು.