ಜಿಲ್ಲೆ

ಶೌರ್ಯ ವಿಪತ್ತು ತಂಡದಿಂದ ಶ್ರಮದಾನ

ಸೌಮ್ಯ ಆರ್

ಬಂಟ್ವಾಳ: ಕೆಳಗಿನ ವಗ್ಗದಿಂದ ಮಾಂಗಜೆವರೆಗೆ ರಸ್ತೆ ಇಕ್ಕಡೆಗಳಲ್ಲಿ ಗಿಡಗಂಟಿಗಳು ಬೆಳೆದು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿರುವುದನ್ನು ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ವಗ್ಗ ವತಿಯಿಂದ ಸ್ವಚ್ಛತಾ ಶ್ರಮದಾನದ ಮೂಲಕ ಕಳೆಗಿಡಗಳನ್ನು ಕಡಿದು ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಲಾಯಿತು. ಕಾವಳಪಡೂರು ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ, ಶೌರ್ಯ ವಿಪತು ನಿರ್ವಹಣಾ ಘಟಕ ಪ್ರತಿನಿಧಿ ಪ್ರವೀಣ, ಸಂಯೋಜಕಿ ರೇಖಾ ಪಿ., ವಗ್ಗ ವಲಯ ಮೇಲ್ವಿಚಾರಕಿ ಸವಿತಾ, ಶೌರ್ಯ ಘಟಕದ ಸದಸ್ಯರಾದ ಸಂಪತ್ ಶೆಟ್ಟಿ, ಮಹಾಬಲ ರೈ, ನಾರಾಯಣಶೆಟ್ಟಿ, ಲಕ್ಷ್ಮಣ, ಅಶೋಕ, ನಾರಾಯಣ ಪೂಜಾರಿ, ಆನಂದ, ವಸಂತ, ಪವಿತ್ರಾ, ಜಯಮಾಲಾ, ಪ್ರಿಯಾಂಕ, ರೋಹಿತ್, ಪವನ್, ದಿನೇಶ್, ಸೇವಾ ಪ್ರತಿನಿಧಿಗಳಾದ ರಜನಿ, ಸುಮಿತ್ರಾ ಭಾಗವಹಿಸಿದ್ದರು.