ಜಿಲ್ಲೆ

ಕುಶಾಲನಗರದಲ್ಲಿ ಸ್ವಚ್ಛತಾ ಕಾರ್ಯ

Mysuru - Desk - Yashavanth Kumar N

ಕುಶಾಲನಗರ: ಗಾಂಧಿ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಬಿಜೆಪಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಐಬಿ ರಸ್ತೆ, ಗಣಪತಿ ದೇವಾಲಯ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ನಗರ ಬಿಜೆಪಿ ಅಧ್ಯಕ್ಷ ವಿ.ಎನ್. ಉಮಾಶಂಕರ್, ಪುರಸಭೆ ಸದಸ್ಯ ಅಮೃತರಾಜ್, ಪಕ್ಷದ ಪ್ರಮುಖರಾದ ಎಂ.ವಿ.ನಾರಾಯಣ, ಎಂ.ಎನ್. ಕುಮಾರಪ್ಪ, ಪುಂಡರೀಕಾಕ್ಷ, ವೈಶಾಕ್, ಪ್ರವೀಣ್, ಸೋಮಶೇಖರ್, ಸುಮನ್ ಗೌಡ ಮತ್ತಿತರರು ಇದ್ದರು.