ಜಿಲ್ಲೆ

ಸ್ವಚ್ಛತೆಯಿಂದ ಸಮಾಜದ ಆರೋಗ್ಯ

ಹೊಳಲ್ಕೆರೆ: ಕರೊನಾ ನಮಗೆ ಆರೋಗ್ಯದ ಪಾಠ ಕಲಿಸಿದೆ. ಎಲ್ಲರೂ ವೈಯಕ್ತಿಕ ಸ್ವಚ್ಛತೆ ಪಾಲಿಸಿದರೆ ಆರೋಗ್ಯಪೂರ್ಣ ಸಮಾಜ ನಿರ್ಮಿಸಬಹುದು ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಜಿಪಂ, ತಾಪಂ ಸಹಯೋಗದೊಂದಿಗೆ ಎಚ್.ಡಿ.ಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚತೆಯೇ ಸೇವೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರ್ರತಿಯೊಬ್ಬರೂ ರೋಗಮುಕ್ತರಾಗಲು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಏಳು ವರ್ಷದ ಹಿಂದೆ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ದೇಶದ 90 ಕೋಟಿ ಜನರಿಗೆ ಶೌಚಗೃಹ ಕಟ್ಟಿಸಿದ್ದಾರೆ. ಸ್ವಚ್ಛತೆೆಯೇ ಸೇವಾ ಆಂದೋಲನ ಕೆಲವು ದಿನಕ್ಕೆ ಸೀಮಿತವಾಗದೆ ವರ್ಷವಿಡೀ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಲೋಕಸಭೆಯಲ್ಲಿ ವಿಶೇಷ ಅಧಿವೇಶನ ಕರೆದು, ಮಹಿಳೆಯರಿಗೆ ರಾಜಕೀಯದಲ್ಲಿ ಶೇ.33ರಷ್ಟು ಮೀಸಲು ಘೋಷಿಸಿ ಮಸೂದೆ ಮಂಡಿಸಿದ್ದಾರೆ. ಇದರಿಂದ ಮಹಿಳೆಯರು ಸಂಸತ್ತು ಹಾಗೂ ವಿಧಾನಸಭೆಗೆ ಪ್ರವೇಶಿಸಲು ಅನುಕೂಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ್, ಜಿಪಂ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಕುಮಾರಣ್ಣ, ಉಪಾಧ್ಯಕ್ಷ, ತಾಪಂ ಇಒ ರವಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಹಿರಿಯರಿದ್ದರು.