ಕುಳಗೇರಿ ಕ್ರಾಸ್: ಗಾಂಧಿ ಜಯಂತಿ ಪ್ರಯುಕ್ತ ಗ್ರಾಮದ ರಾಶಿ ಸಮೂಹ ಶಿಕ್ಷಣ ಸಂಸ್ಥೆಯ ಭುವನೇಶ್ವರಿ ಸ್ವತಂತ್ರ ಪಪೂ ಮಹಾವಿದ್ಯಾಲಯ ಹಾಗೂ ಗೋವನಕೊಪ್ಪದ ಆದಿಶಕ್ತಿ ಸಾಂಸ್ಕೃತಿ ಜಾನಪದ ಕಲಾ ತಂಡದಿಂದ ಸ್ವಚ್ಛತೆಯೇ ಸೇವೆ ಅಭಿಯಾನ ನಡೆಯಿತು.
ಗ್ರಾಮದ ಬಸ್ ನಿಲ್ದಾಣ ಪೊಲೀಸ್ ಠಾಣೆ ಆವರಣ, ಮತ್ತಿತರ ಸಾರ್ವಜನಿಕರ ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು.
ಗ್ರಾಪಂ ಮಾಜಿ ಸದಸ್ಯರಾದ ಸಣ್ಣಬೀರಪ್ಪ ಪೂಜಾರ, ಗದ್ದಿಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ರೇಣುಕಾ ಹಿರಗನ್ನವರ, ಪಿಡಿಒ ಎಸ್. ಜಿ. ಪರಸನ್ನವರ, ಸದಸ್ಯರಾದ ವೆಂಕಣ್ಣ ಹೊರಕೇರಿ, ಹನುಮಂತ ನರಗುಂದ, ಮಾರುತಿ ತಳವಾರ, ರಾಮನಗೌಡ ದ್ಯಾವನಗೌಡ್ರ, ಚುರ್ಚಪ್ಪ ಜಾಡರ, ಆರ್. ಎಸ್. ಮರೆನ್ನವರ, ಸಿದ್ದಪ್ಪ ದಂಡಿನ, ಪ್ರಚಾರ್ಯೆ ರೂಪಾ ಪಾಟೀಲ, ಉಪನ್ಯಾಸಕರಾದ ಬಿ.ಕೆ. ಹೊರಕೇರಿ, ಶೀಲಾ ಮೇಟಿಮಠ, ಎಸ್. ಎಚ್. ಮೇಟಿ, ಎಚ್.ಎಚ್. ಪೂಜಾರ, ಎಂ.ಬಿ. ಕೋರಣ್ಣವರ, ಜಾನಪದ ಕಲಾತಂಡದವರಾದ ಶಂಕರ ಹೊರಕೇರಿ ಇತರರಿದ್ದರು.