ನರಗುಂದ: ಪೌರ ಕಾರ್ವಿುಕರು ಸ್ವಚ್ಛತಾ ಸೇವೆಯಲ್ಲಿ ಭಾಗಿಯಾಗಿ ನಗರಗಳನ್ನು ಸ್ವಚ್ಛ ಮಾಡುವ ಕಾರ್ಯ ಅದು ಅತ್ಯಂತ ಉತ್ಕೃಷ್ಟವಾದುದು. ಇಂತಹ ಅನುಪಮ ಸೇವೆ ಸಲ್ಲಿಸುತ್ತಿರುವ ಪರಿಣಾಮ ಸ್ವಚ್ಛತಾ ಹಿ ಸೇವಾ ಯೋಜನೆಯಡಿ ನರಗುಂದ ಪುರಸಭೆ ರಾಜ್ಯದಲ್ಲಿ 8ನೇ ಸ್ಥಾನ ಗಳಿಸಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಪರುಶುರಾಮ ಗುಡದಾರಿ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿರುವ ಬಾಬಾಸಾಹೇಬ ಭಾವೆ ಕಲಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನರಗುಂದ ತಾಲೂಕು ಮಟ್ಟದ 13ನೇ ಪೌರ ಕಾರ್ವಿುಕರ ದಿನಾಚರಣೆಯಲ್ಲಿ ಪೌರ ಕಾರ್ವಿುಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಪ್ರತಿ ಮನೆಗೂ ಬೆಳಗಿನ ಜಾವ ತೆರಳಿ ವಾಹನದಲ್ಲಿ ತಾಜ್ಯ ಸಂಗ್ರಹಿಸಿ ವಿಲೇವಾರಿ ಘಟಕಕ್ಕೆ ರವಾನೆ ಮಾಡುತ್ತಾರೆ. ಸಾರ್ವಜನಿಕರು ಸ್ಚಚ್ಛತೆಗೆ ಗಮನನೀಡಬೇಕು. ಹಸಿ ಮತ್ತು ಒಣ ಕಸಗಳನ್ನು ಬೇರ್ಪಡಿಸಿ ನಿತ್ಯ ಪುರಸಭೆಯಿಂದ ಸಂಚರಿಸುವ ವಾಹನದಲ್ಲಿ ಹಾಕಬೇಕು ಎಂದರು.
ಸಮುದಾಯ ಸಂಘಟನೆ ಅಧಿಕಾರಿ ವಿಜಯಲಲಕ್ಷ್ಮೀ ಹಿರೇಮಠ ಮಾತನಾಡಿ, ಪೌರ ಕಾರ್ವಿುಕರ ಸೇವೆ ಅಮೂಲ್ಯವಾದುದು. ಮಹಿಳಾ ಪೌರ ಕಾರ್ವಿುಕರು ಕುಟುಂಬಗಳನ್ನು ಬಲಿಷ್ಠಗೊಳಿಸಲು ಅನೇಕ ಯೋಜನೆಗಳಿವೆ. ಸ್ವಸಹಾಯ ಸಂಘಗಳ ಮುಖಾಂತರ ಸ್ವಯಂ ಉದ್ಯೋಗ ಮಾಡುವ ಮೂಲಕ ಕುಟುಂಬಗಳನ್ನು ಅರ್ಥಿಕ ಸುಧಾರಣೆಗೆ ತರಬೇಕು ಎಂದು ಸಲಹೆ ನೀಡಿದರು.
ಪೊ›. ಆರ್.ಬಿ. ಚಿನಿವಾಲರ ಮಾತನಾಡಿದರು. ಪೌರ ಕಾರ್ವಿುಕರನ್ನು, ಪುರಸಭೆ ಸಿಬ್ಬಂದಿ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಪುರಸಭೆಯಿಂದ ವಿಶೇಷ ಯೊಜನೆಯಡಿ ಪೌರ ಕಾರ್ವಿುಕರಿಗೆ 7000 ರೂ.ಗಳ ಚೆಕ್ ವಿತರಣೆ ಮಾಡಲಾಯಿತು. ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಯಲಿಗಾರ ಮಾತನಾಡಿದರು. ಶ್ರೀಧರ ಹಂದಿಗೋಳ ಪುರಸಭೆ ನೌಕರರ ಕುರಿತಾಗಿ ಬರೆದ ಸ್ವರಚಿತ ಕವನ ವಾಚನ ವಾಚಿಸಿದರು.
ಪುರಸಭೆ ಉಪಾಧ್ಯಕ್ಷೆ ಕಾಶವ್ವ ಬಸವರಾಜ ಮಳಗಿ, ಸದಸ್ಯರಾದ ಭಾವನಾ ಪಾಟೀಲ, ನೀಲಮ್ಮ ವಡ್ಡಿಗೇರಿ, ರೇಣುಕಾ ಕಿಲಾರಿ, ರಾಚನಗೌಡ ಪಾಟೀಲ, ರಾಚಪ್ಪ ಕೆರೂರ, ಪೌರಕಾರ್ವಿುಕರ ಸಂಘದ ಅಧ್ಯಕ್ಷ ಬಸವರಾಜ ಚಲವಾದಿ, ಎಚ್.ಎನ್. ಗೋಟೂರ, ಬಸಪ್ಪ ಸವದತ್ತಿ, ದಿವಾನಸಾಬ ಕಿಲ್ಲೇದಾರ ಇದ್ದರು. ವಿಠಲ ಹಡಗಲಿ ನಿರೂಪಿಸಿ, ವಂದಿಸಿದರು.