ಜಿಲ್ಲೆ

ಪ್ರಕೃತಿ ಉಳಿವಿಗಾಗಿ ಸ್ವಚ್ಛತೆ ಅವಶ್ಯ

ತುಮಕೂರು ಡೆಸ್ಕ್

ಶಿರಾ: ಜನರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಕನಕಪ್ಪ ಮೇಲಸಕ್ರಿ ಹೇಳಿದರು.

ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ನಾದೂರು, ಹೆಂದೊರೆ ಮತ್ತು ಹೊಸಹಳ್ಳಿ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ದಿನನಿತ್ಯದ ಬದುಕಿನಲ್ಲಿ ಪ್ಲಾಸ್ಟಿಕ್​ ವಸ್ತುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕಿದೆ. ಈಗಾಗಲೇ ಭೂಮಿಯ ಉಷ್ಣಾಂಶ ಏರಿಕೆಯಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ತಿಳಿಸಿದರು.

ನಾದೂರು ಗ್ರಾಪಂ ಅಧ್ಯಕ್ಷೆ ತುಳಸಿ ಮಧುಸೂದನ್​ ಮಾತನಾಡಿ, ಗ್ರಾಪಂ ಸ್ವಚ್ಛತಾ ಕೆಲಸಕ್ಕೆ ಆದ್ಯತೆ ನೀಡುತ್ತದೆ. ಎಲ್ಲರೂ ಸಹಕಾರ ನೀಡಿದರೆ ಮತ್ತಷ್ಟು ಕೆಲಸವನ್ನು ಮಾಡಲು ಉತ್ತೇಜನ ಸಿಗುತ್ತದೆ ಎಂದರು.

ಸದಸ್ಯರಾದ ಪಾರ್ವತಮ್ಮ, ಮೇಘಶ್ರೀ, ಶ್ರೀಮತಿ, ಮೆಹರ್​ ತಾಜ್​, ಲಕ್ಷ$್ಮಕ್ಕ, ವಿಜಯಕುಮಾರ್​, ಭೂತರಾಜ್​, ಮಂಜುನಾಥಸ್ವಾಮಿ, ಮುಖಂಡರಾದ ಗಂಗಣ್ಣ, ಚಂದ್ರು, ಮಧುಸೂದನ್​, ನವೀನ್​, ಅಂಗನವಾಡಿ ಕಾರ್ಯಕರ್ತರಾದ ಗೀತಮ್ಮ, ವೀಣಾ, ಆಶಾ ಕಾರ್ಯಕರ್ತೆ ರೇಣುಕಾ ಇದ್ದರು.