ಬೇಲೂರು ಪಟ್ಟಣದ ಮನೆಯೊಂದರ ಡ್ರಮ್‌ನಲ್ಲಿ ನೀರು ತುಂಬಿರುವುದನ್ನು ಪರಿಶೀಲಿಸುತ್ತಿರುವ ಆರೋಗ್ಯ ಇಲಾಖೆಯ ಎನ್‌ಜಿಒ ಸಿಬ್ಬಂದಿ ಸುಧಾ ಹಾಗೂ ಸಂಧ್ಯಾ. 
ಜಿಲ್ಲೆ

ವಿವಿಧ ವಾರ್ಡ್‌ಗಳಲ್ಲಿ ಸ್ವಚ್ಛತೆ ಪರಿಶೀಲನೆ

ರವಿಕುಮಾರ್ ಪಿ. ಕೆ

ಬೇಲೂರು: ಡೆಂಘೆ ಹಾಗೂ ಚಿಕೂನ್ ಗುನ್ಯಾ ಹರಡುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿನ ಬಡಾವಣೆಗಳ ಮನೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಶೇಖರಿಸಿದ್ದ ನೀರನ್ನು ಪರಿಶೀಲಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು.

ಆರೋಗ್ಯ ಇಲಾಖೆ ಎನ್‌ಜಿಒ ಸಿಬ್ಬಂದಿ ಪಟ್ಟಣದ ವಿವಿಧ ಬಡಾವಣೆಗಳಿಗೆ ಗುರುವಾವಾರ ಭೇಟಿ ನೀಡಿ ಮನೆಗಳಲ್ಲಿ ತುಂಬಿದ್ದ ನೀರಿನ ಟ್ಯಾಂಕ್ ಮತ್ತು ಘನತ್ಯಾಜ್ಯ ವಸ್ತುಗಳು, ಮನೆಯಲ್ಲಿರುವ ಫ್ರಿಡ್ಜ್, ನೀರಿನ ಸಂಪ್‌ಗಳನ್ನು ಪರಿಶೀಲಿಸಿದರು. ಈ ಸಂದರ್ಭ ಕೆಲವೊಂದು ಮನೆಗಳಲ್ಲಿ ತುಂಬಿದ್ದ ಡ್ರಮ್ ಮತ್ತು ಸಂಪ್‌ಗಳಲ್ಲಿ ಡೆಂೆಗೆ ಕಾರಣವಾದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಮನೆಯವರಿಗೆ ತಿಳಿವಳಿಕೆ ಹೇಳಿ. ನೀರನ್ನು ಚೆಲ್ಲಿಸಿ ಡ್ರಮ್ ಹಾಗೂ ಸಂಪನ್ನು ಚೆನ್ನಾಗಿ ತೊಳೆಸಿ ಒಣಗಿಸಿದ ನಂತರ ನೀರು ತುಂಬಿಸುವಂತೆ ಹಾಗೂ ಏಳು ದಿನಗಳಿಗೊಮ್ಮೆ ನೀರು ತುಂಬಿದ ಎಲ್ಲ ಪರಿಕರಗಳನ್ನು ಸ್ವಚ್ಛಗೊಳಿಸಿ ಒಣಗಿಸಿ ನೀರು ತುಂಬಿಸುವಂತೆ ಅರಿವು ಮೂಡಿಸುತ್ತಿದ್ದ ಬಗ್ಗೆ ಜನರಿಂದ ಉತ್ತಮ ಪ್ರಶಂಸೆ ವ್ಯಕ್ತವಾಯಿತು.

ಆರೋಗ್ಯ ಇಲಾಖೆ ಎನ್‌ಜಿಒ ನೌಕರೆ ಸುಧಾ ಮಾತನಾಡಿ, ಇತ್ತೀಚಿನ ಮಳೆಗಾಲದ ಸಂದರ್ಭ ಎಲ್ಲೆಂದರಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಜತೆಗೆ ಮನೆಗಳಲ್ಲಿ ನೀರು ತುಂಬಿಸಿ ಕೊಂಡಿರುವ ಡ್ರಮ್, ಟ್ಯಾಂಕ್, ಸಂಪ್‌ಗಳನ್ನು ತೊಳೆಯದ ಕಾರಣ ಡೆಂೆ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಆದ್ದರಿಂದ ಈ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.