ಜಿಲ್ಲೆ

ಸೀತಾಂಗೋಳಿ ಪೇಟೆಯಲ್ಲಿ ಸ್ವಚ್ಛತೆ

ಸೌಮ್ಯ ಆರ್

ಕುಂಬಳೆ: ದೇಶೀಯ ಸೇವಾ ಭಾರತಿಯ ಪುತ್ತಿಗೆ ಘಟಕದ ಆಶ್ರಯದಲ್ಲಿ ಶನಿವಾರ ಸೀತಾಂಗೋಳಿ ಪೇಟೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಪೇಟೆ ಸುತ್ತಮುತ್ತಲಿನ ಪ್ರದೇಶದಲ್ಲಿನ ಪ್ಲಾಸ್ಟಿಕ್, ಕಾಗದ ಸೇರಿದಂತಿರುವ ಕಸಗಳನ್ನು ಸ್ವಚ್ಛಗೊಳಿಸಲಾಯಿತು.

ಪ್ರವೀಣ್ ಕುಮಾರ್, ಅಪ್ಪಣ್ಣ, ಉಮಲತಾ, ದಿನೇಶ್ ಬಬ್ಬರಿಯಕಲ್ಲು, ಉಷಾ, ಶಶಿಕಲಾ ಅನೋಡಿಪಳ್ಳ, ಪ್ರಸನ್ನ, ಅಜಿತ್ ಕುಮಾರ್, ಅರುಣ್ ಕುಮಾರ್, ಉದಯ ಮರಕ್ಕಾಡ್ ಮೊದಲಾದವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸೇವಾ ಭಾರತಿ ಕಾರ್ಯಕರ್ತರು ಭಾಗವಹಿಸಿದ್ದರು.