ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಚಿ ಒಕ್ಕೂಟ ವತಿಯಿಂದ ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಹಲವಾರು ವರ್ಷಗಳಿಂದ ಹಮ್ಮಿಕೊಂಡು ಬರುತ್ತಿದ್ದ ಸೇವಾ ಕಾರ್ಯಕ್ರಮಗಳಲ್ಲೊಂದಾದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಲೆಯ ಆವರಣದಲ್ಲಿ ಬೆಳೆದ ಹುಲ್ಲು, ಗಿಡ ಗಂಟಿಗಳನ್ನು ಕೀಳುವ ಮುಖೇನ ಪರಿಸರ ಸ್ವಚ್ಛಗೊಳಿಸಲಾಯಿತು. ಸುಮಾರು 40 ಜನ ಒಕ್ಕೂಟದ ಕಾರ್ಯಕರ್ತರು ಈ ಸೇವಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರಮದಾನ ಮಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲೆತ್ತೂರು ವಲಯದ ಮೇಲ್ವಿಚಾರಕಿ ಶಶಿಕಲಾ, ಮಂಚಿ ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ ಚಂಚಲಾಕ್ಷಿ, ಮಂಚಿ ಒಕ್ಕೂಟದ ಅಧ್ಯಕ್ಷೆ ದಿವಾಕರ ನಾಯಕ್ ಕುಂಟೂರು ಉಪಸ್ಥಿತರಿದ್ದರು. ಮಂಚಿ ಕೊಳ್ನಾಡು ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಶಂಕರ್ ರಾವ್, ಶಿಕ್ಷಕ ತಾರಾನಾಥ್ ಕೈರಂಗಳ, ಸಿಬ್ಬಂದಿ ನಾಗೇಶ್ ಸಿ.ಎಚ್. ಸಹಕರಿಸಿದರು.