ಮಡಿಕೇರಿ: ಅ17 ರಂದು ಭಾಗಮಂಡಲ, ತಲಾ ಕಾವೇರಿ ತೀರ್ಥ ಉದ್ಭವ ಜಾತ್ರೆ ಹಿನ್ನೆಲೆ ವಿರಾಜಪೇಟೆ ತಾಲೂಕಿನ ಮಹಿಳಾ ಮೋರ್ಚಾದ ವತಿಯಿಂದ ಕ್ಷೇತ್ರದಲ್ಲಿ ಬುಧವಾರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಲಕಾವೇರಿಯಿಂದ ಭಾಗಮಂಡಲ ವರೆಗೆ ರಸ್ತೆ ಬದಿಯ ಕಸ ಸಂಗ್ರಹಿಸಿ ಸ್ವಚ್ಚತೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಮಾಜಿ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ತಲಕಾವೇರಿಯಲ್ಲಿ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಭಾಗಮಂಡಲದಿಂದ ತಲಾ ಕಾವೇರಿವರೆಗೆ ಏಳು ಕಿಲೋ ಮೀಟರ್ ವರೆಗೆ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ಕ್ಷೇತ್ರದ ಜನರ ಪರವಾಗಿ ಅಭಿನಂದನೆ. ತಲಾ ಕಾವೇರಿಯನ್ನು ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಭಾರತದ ಬಹುತೇಕ ಜನರು ಅವಲಂಬಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ತಾಲೂಕಿನ ಮಹಿಳಾ ಮೋರ್ಚಾದ ಅಧ್ಯಕ್ಷೆ ಕವಿತಾ ಬೋಜಪ್ಪ, ಪ್ರಾಧಾನ ಕಾರ್ಯದರ್ಶಿ ಶಿಲ್ಪ, ರತಿ ಅಚ್ಚಪ್ಪ, ರಾಜ್ಯದ ಕೃಷಿ ಮೋರ್ಚದ ಸದಸ್ಯೆ ಯಮುನಾ ಚಂಗಪ್ಪ, ಜಿಲ್ಲಾ ಮಹಿಳಾ ಮೋರ್ಚಾದ ಸದಸ್ಯೆ ಸುಶೀಲಾ ಅಶೋಕ್, ಮಡಿಕೇರಿ ಮೂಡಾ ಅಧ್ಯಕ್ಷ ರಮೇಶ್ ಹೊಳ್ಳ, ಯಮುನಾ ಚಂಗಪ್ಪ, ಅಯ್ಯಂಗೇರಿ ಗ್ರಾ.ಪಂ. ಅಧ್ಯಕ್ಷ ಕುಯ್ಯಮುಡಿ ರಂಜು, ಶಕ್ತಿ ಕೇಂದ್ರ ಪ್ರಮುಖ ರಾಜೀವ್, ಎಸ್ಟಿ ಮೋರ್ಚಾದ ಅಧ್ಯಕ್ಷ ಮಿಟ್ಟು ರಂಜಿತ್, ಮಹಿಳಾ ಮೋರ್ಚಾದ ಸದಸ್ಯೆಯರು ಸೇರಿದಂತೆ ಇತರ ಪ್ರಮುಖರು ಪಾಲ್ಗೊಂಡಿದ್ದರು.